ನಾಳೆ ಮೈಸೂರಿನಲ್ಲಿ ಸಂಸದರ ‘ಕಿಡ್ಸ್‌ ಸೈಕ್ಲಾಥಾನ್‌ 2025’

ಮೈಸೂರು, ನವೆಂಬರ್, 22,2025 (www.justkannada.in): ಸಂಸದರ ಕ್ರೀಡಾ ಮಹೋತ್ಸವದ ಅಂಗವಾಗಿ ಫಿಟ್‌ ಯುವ ಫಾರ್‌ ವಿಕಸಿತ್‌ ಭಾರತ್‌ ನ ಯೋಜನೆಯಡಿ ಕಿರಿಯರಿಗೆ ಸ್ಕೈಕ್ಲಾಥಾನ್‌ ಆಯೋಜಿಸಲಾಗಿದೆ.

ಮಕ್ಕಳ ದಿನಾಚರಣೆ ಅಂಗವಾಗಿ ನವೆಂಬರ್‌ 23ರಂದು(ನಾಳೆ) ಬೆಳಗ್ಗೆ ಇದನ್ನ ಆಯೋಜಿಸಲಾಗಿದೆ. ಸೈಕ್ಲಿಂಗ್‌ ಜೊತೆಗೆ ರಸ್ತೆ ಸುರಕ್ಷತಾ ಜಾಗೃತಿ, ಪರಿಸರ ಸಂರಕ್ಷಣೆ ಅರಿವು ಮೂಡಿಸಲಾಗುವುದು. ಕಿರಿಯರಿಗೆ ಮನರಂಜನೆ, ಕ್ರೀಡಾ ಮನೋಭಾವ, ಆತ್ಮವಿಶ್ವಾಸ ಹಾಗೂ ಕ್ರೀಡಾ ಮನೋಭಾವ ಹೆಚ್ಚಳಕ್ಕೆ ವಿಶೇಷ ವೇದಿಕೆ ಒದಗಿಸಲಾಗುತ್ತದೆ.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ನೇತೃತ್ವದಲ್ಲಿ ಈ ಕ್ರೀಡೋತ್ಸವ ಮೈಸೂರು ಜಿಲ್ಲಾ ಅಮೆಚೂರ್‌ ಸೈಕ್ಲಿಂಗ್‌ ಅಸೋಸಿಯೇಷನ್‌, ಫೋನಿಕ್ಸ್‌ ಇಂಟರ್‌ನ್ಯಾಷನಲ್‌ ಅಕಾಡೆಮಿ, ಸೈಕ್ಲೋಪೀಡಿಯಾ, ಫನ್‌ ಪ್ಯಾಲೇಸ್‌, ಸನ್‌ಪ್ಯೂರ್‌, ಲಿಟ್ಲ್‌ ಎಲ್ಲಿ, ಬುಕ್ಸ್‌ ಅಂಡ್‌ ಬ್ರೇನ್ಸ್‌ ಜಂಟಿ ಸಹಯೋಗದಲ್ಲಿ ನಡೆಯಲಿದೆ.

ಪ್ರತಿಯೊಬ್ಬ ಸೈಕಲ್‌ ರೈಡರ್‌ ಗೆ ಸೈಕ್ಲಾಥಾನ್‌ ಟೀಶರ್ಟ್‌, ಪಾನೀಯ-ತಿನಿಸು ಮತ್ತು ಭಾಗವಹಿಸುವಿಕೆಯ ಪ್ರಮಾಣ ಪತ್ರ ನೀಡಲಾಗುವುದು. ಪ್ರತಿ ವಿಭಾಗದಲ್ಲಿ ವಿಜೇತ ಅಭ್ಯರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಗುವುದು.

ಹೆಚ್ಚಿನ ಮಾಹಿತಿಗೆ ಈ ಸಂಖ್ಯೆಯನ್ನು ಸಂಪರ್ಕಿಸಬಹುದು 88848 51538,

99869 73280

Key words: MPs’ Kids Cyclothon 2025, Mysore, Nov 23rd