ಬೆಂಗಳೂರು,ನವೆಂಬರ್,22,2025 (www.justkannada.in): ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ 85 ರಿಂದ 90 ಸ್ಥಾನವನ್ನ ಗೆಲ್ಲಬೇಕು ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಕಾರ್ಯಕರ್ತರಿಗೆ ಕರೆ ನೀಡಿದರು.
ಜೆಡಿಎಸ್ ಕಚೇರಿಯಲ್ಲಿ ಇಂದು ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಕಾಂಗ್ರೆಸ್ ಕೈಗಾರಿಕೆಗಳನ್ನ ಮುಚ್ಚುವ ಸ್ಥಿತಿಗೆ ತಂದಿದ್ದಾರೆ. ಅವರ ಸಾಧನೆ ಹೇಳಿಕೆ ಪ್ರಕಾರವಷ್ಟೆ. ಎನ್ ಡಿಎ ಇದ್ರೂ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಬರುತ್ತೆ ಅಂತಾ ಚರ್ಚೆ. ನಾವು ಬಿಹಾರದ ರೀತಿ ಆರಾಮವಾಗಿ ಗೆಲ್ಲಬಹುದು ಅಂತಾ ಕೂರಬೇಡಿ ನಾವು ಕೇಳುವ ಶಕ್ತಿ ನೀವು ನೀಡಬೇಕು. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ 85ರಿಂದ 90 ಸ್ಥಾನ ಗೆಲ್ಲಬೇಕು. ಕಳದ ಬಾರಿ ನಿತೀಶ್ ಕುಮಾರ್ 48 ಸ್ಥಾನ ಗೆದ್ದಿದ್ದರು. ಈ ಬಾರಿ 88 ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಯು ಗೆಲುವು ಸಾಧಿಸಿದೆ . ಜೆಡಿಎಸ್ 14 ಸ್ಥಾನಕ್ಕೆ ಇಳಿಯುತ್ತೆ ಎಂದು ಕಾಂಗ್ರೆಸ್ ನವರು ಹೇಳಿದ್ರು. ಕಾಂಗ್ರೆಸ್ ನವರವನ್ನ ಆ ಜಾಗಕ್ಕೆ ಕಳುಹಿಸಬೇಕು ಎಂದು ಟಾಂಗ್ ಕೊಟ್ಟರು.
ರಾಜ್ಯ ಕಾಂಗ್ರೆಸ್ ಸರ್ಕಾರ ಕಿತ್ತೆಸೆಯಲು ಜನ ಕಾಯುತ್ತಿದ್ದಾರೆ
ಈ ಕಾಂಗ್ರೆಸ್ ಸರ್ಕಾರವನ್ನು ಕಿತ್ತೆಸೆಯಲು ಜನ ಕಾಯುತ್ತಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಹಲವು ಬೆಳವಣಿಗೆ ನಡೆಯುತ್ತಿದೆ. ಮುಂದಿನ 6 ತಿಂಗಳಲ್ಲಿ ನೀರಿಕ್ಷಿಸದ ತೀರ್ಮಾನ ಆಗಬಹುದು. ಯಾವ ರೀತಿ ಅಂತಾ ನಾನು ಹೇಳುವುದಿಲ್ಲ ಎಂದರು.
Key words: JDS, 85 to 90 seats, next elections, Union Minister, HDK







