ಬೆಂಗಳೂರು,ನವೆಂಬರ್,22,2025 (www.justkannada.in): ಬೆಂಗಳೂರಿನಲ್ಲಿ ಹಾಡಹಗಲೇ ನಡೆಸಿದ್ದ 7.11 ಕೋಟಿ ರೂ. ದರೋಡೆ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನ ಬಂಧಿಸಿ 5.76 ಕೋಟಿ ರೂಪಾಯಿ ವಶಕ್ಕೆ ಪಡೆಯಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದರು.
ಪ್ರಕರಣ ಕುರಿತು ಇಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಆರೋಪಿಗಳು 7.11 ಕೋಟಿ ರೂ. ದರೋಡೆ ಮಾಡಿದ್ದರು. ದರೋಡೆಯಾದ ಒಂದುವರೆ ಗಂಟೆ ತಡವಾಗಿ ಮಾಹಿತಿ ಸಿಕ್ಕಿತು. ಆರೋಪಿಗಳು ಸಿಸಿಟಿವಿ ಇಲ್ಲದಿರುವ ಕಡೆ ಪ್ಲಾನ್ ಮಾಡಿ ಕೃತ್ಯವೆಸಗಿದ್ದಾರೆ. ಆರೋಪಿಗಳು ಸರಿಯಾದ ಮೊಬೈಲ್ ಬಳಸಿರಲಿಲ್ಲ.
ಆರೋಪಿಗಳ ಪತ್ತೆಗೆ 11 ತಂಡ ರಚನೆ ಮಾಡಲಾಗಿತ್ತು. ದರೋಡೆಯಲ್ಲಿ 6ರಿಂದ 8 ಮಂದಿ ಭಾಗಿಯಾಗಿದ್ದು, ತೆಲಂಗಾಣ, ಗೋವಾ, ಕೇರಳದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಇನ್ನೂ ಹಣ ರಿಕವರಿ ಆಗಬೇಕಿದೆ. ಇವರೆಗೆ 30 ಜನರನ್ನು ವಿಚಾರಣೆಗೊಳಪಡಿಸಿದ್ದು ಮೂವರು ಆರೋಪಿಗಳನ್ನ ಬಂಧಿಸಲಾಗಿದೆ. ಈಗಲೂ ಪೊಲೀಸ್ ತಂಡಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದರು.
Key words: Robbery case, Bengaluru, Rs 5.76 crore, seized, three, arrested







