ದುಬೈ,ನವೆಂಬರ್,21,2025 (www.justkannada.in): ದುಬೈ ಏರ್ ಶೋ ವೇಳೆ ಭಾರತದ HAL ನಿರ್ಮಿತ ‘ತೇಜಸ್’ ಲಘು ಯುದ್ಧವಿಮಾನ ಪತನವಾಗಿ ಪೈಲಟ್ ಸಾವನ್ನಪ್ಪಿರುವ ಘಟನೆ ನಡೆದಿದೆ.
ಅಲ್ ಮಕ್ತೌಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ‘ದುಬೈ ಏರ್ ಶೋ 2025’ ನಡೆಯುತ್ತಿತ್ತು ಈ ವೇಳೆ ಭಾರತದ HAL ನಿರ್ಮಿತ ‘ತೇಜಸ್’ ಲಘು ಯುದ್ಧವಿಮಾನ ಪತನವಾಗಿದ್ದು, ಪೈಲಟ್ ಮೃತಪಟ್ಟಿದ್ದಾರೆ. ಇಂದು ಮಧ್ಯಾಹ್ನ 2:10ರ ವೇಳೆಗೆ ಈ ಘಟನೆ ನಡೆದಿದೆ.
ತೇಜಸ್ ವಿಮಾನವನ್ನು ಒಳಗೊಂಡ ಎರಡನೇ ಅಪಘಾತ ಇದಾಗಿದ್ದು ಮೊದಲನೆಯದ್ದು 2024ರಲ್ಲಿ ಜೈಸಲ್ಮೇರ್ ಬಳಿ ಸಂಭವಿಸಿತ್ತು. ಘಟನೆ ಕುರಿತು ಭಾರತೀಯ ವಾಯುಪಡೆ ತನಿಖೆಗೆ ಆದೇಶ ಮಾಡಿದೆ.
Key words: Tejas fighter jet, crashes, airshow







