5 ವರ್ಷ ನಾನೇ ಮುಂದುವರೆಯುತ್ತೇನೆ: ಹೈಕಮಾಂಡ್ ಹೇಳಿದ್ದೆ ಫೈನಲ್ – ಸಿಎಂ ಸಿದ್ದರಾಮಯ್ಯ

ಮೈಸೂರು,ನವೆಂಬರ್,21,2025 (www.justkannada.in):  ರಾಜ್ಯದಲ್ಲಿ ಅಧಿಕಾರ ಹಂಚಿಕೆ ಮತ್ತು ಸಚಿವ ಸಂಪುಟ ಭಾರೀ ಚರ್ಚೆಯಾಗುತ್ತಿದ್ದು ಈ ಬಗ್ಗೆ  ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಮುಂದಿನ ಬಜೆಟ್ ಕೂಡ ನಾನೇ ಮಂಡಿಸುತ್ತೇನೆ.  ಐದು ವರ್ಷ ಪೂರ್ಣಾವಧಿ ನಾನೇ ಮುಗಿಸುತ್ತೇನೆ.  ಎಲ್ಲವನ್ನೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದಿದ್ದಾರೆ.

ಸಚಿವ ಚಲುವರಾಯಸ್ವಾಮಿ ನಿನ್ನೆ ದೆಹಲಿಗೆ ಹೋಗಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ನಾನು ಕೂಡ ಮಾತನಾಡಿದ್ದೇನೆ. ನಾನು ಕೇಂದ್ರದ ಕೃಷಿ ಸಚಿವರನ್ನು ಭೇಟಿ ಮಾಡಲು ಹೋಗಿದ್ದೇನೆ ಎಂದು ಹೇಳಿದ್ದಾರೆ. ದೆಹಲಿಗೆ ಹೋಗಲೇಬಾರದು ಅಂತೇನಿಲ್ಲ. ಹೈ ಕಮಾಂಡ್ ಅವರು ತೀರ್ಮಾನ ಮಾಡುತ್ತಾರೆ. ಸಂಪುಟ ಪುನಾರಚನೆ ಎಲ್ಲ ಹೈ ಕಮಾಂಡ್ ಮಾಡುವುದು. ಅವರು ಏನಾದರೂ ಹೇಳಿದ್ದಾರಾ? ಹೈ ಕಮಾಂಡ್ ಹೇಳಿದ್ದನ್ನು ನಾನು ಕೇಳಬೇಕು. ಡಿಕೆ ಶಿವಕುಮಾರ್ ಕೂಡ ಕೇಳಬೇಕು. ಇನ್ನು ಡಿಕೆ ಸುರೇಶ್ ಹೇಳಿದ್ದು ಈಗಲೂ ನಾನು ಗ್ಯಾರೆಂಟಿ ವಿಚಾರದಲ್ಲಿ ಮಾತು ತಪ್ಪಲ್ಲ ಎಂದರು.

ಹಾಗೆಯೇ ಮುಂದಿನ ಬಜೆಟ್ ಕೂಡ ನಾನೇ ಮಂಡನೆ ಮಾಡುತ್ತೇನೆ. ಪೂರ್ತಿ ನಾನೇ ಮುಂದುವರೆಯುತ್ತೇನೆ. ಮಲ್ಲಿಕಾರ್ಜುನ ಖರ್ಗೆ ಅವರನ್ನ ಕೂಡ  ನಾಳೆ ಭೇಟಿ ಮಾಡುತ್ತೇನೆ ಎಂದರು.

ಶಾಸಕ ಇಕ್ಬಾಲ್ ಹುಸೇನ್ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಹೈ ಕಮಾಂಡ್ ಹೇಳಿದಕ್ಕೆ ನಾನು ಮಂತ್ರಿಗಳು ಎಲ್ಲ ಬದ್ಧವಾಗಿರಬೇಕು. ಹೈ ಕಮಾಂಡ್ ಹೇಳಿದ್ದೆ ಫೈನಲ್ ಎಂದು ನುಡಿದರು.

Key words: continue, 5 years, High command, CM, Siddaramaiah