ಅಧಿಕಾರ ಹಂಚಿಕೆ ವಿಚಾರ: ಸಿಎಂ, ಡಿಸಿಎಂಗೆ ಸಲಹೆ ನೀಡಿದ ಸಚಿವ ಸತೀಶ್ ಜಾರಕಿಹೊಳಿ

ಬೆಂಗಳೂರು,ನವೆಂಬರ್,21,2025 (www.justkannada.in): ರಾಜ್ಯದಲ್ಲಿ ಅಧಿಕಾರ ಹಂಚಿಕೆ ವಿಚಾರ ಸಂಬಂಧ ಸಿಎಂ ಮತ್ತು  ಡಿಸಿಎಂ ಇಬ್ಬರೂ ಕುಳಿತುಕೊಂಡು ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಇಬ್ಬರು ನಾಯಕರಿಗೆ  ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಸಲಹೆ ನೀಡಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, 30 ತಿಂಗಳುಗಳಿಂದ ಬಿಜೆಪಿಯವರು ಇದೇ ವಿಚಾರ ಮಾತಾಡುತ್ತಿದ್ದಾರೆ. ಅಧಿಕಾರ ಹಂಚಿಕೆ ಗೊಂದಲ ವಿಚಾರವನ್ನ ಬೇಗ ಬಗೆಹರಿಸಿ. ಈ ವಿಚಾರವಾಗಿ ಸಿಎಂ,  ಡಿಸಿಎಂಗೆ ಮನವಿ ಮಾಡುತ್ತೇವೆ. ಇಲ್ಲೇ ಸಮಸ್ಯೆ ಬಗೆಹರಿದರೇ ದೆಹಲಿಗೆ ಹೋಗುವ ಅವಶ್ಯಕತೆ ಇಲ್ಲ ಎಂದರು.

ಡಿನ್ನರ್ ಮೀಟಿಂಗ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ,  ಡಿನ್ನರ್ ಮೀಟಿಂಗ್ ಹೊಸದೇನಲ್ಲ. ಈ ಹಿಂದೆಯೂ ಸೇರಿದ್ದವು.  ಮೊದಲೇ ಡಿನ್ನರ್ ಗೆ ಸೇರಬೇಕು ಅಂತಾ ಮಾತನಾಡಿಕೊಂಡಿದ್ವವು.  ನಮ್ಮ ಡಿನ್ನರ್ ಮೀಟಿಂಗ್ 30 ದಿನಗಳಲ್ಲಿ 15 ಬಾರಿ ನಡೆದಿದೆ.  ನಾವು ಯಾವುದೇ ಚರ್ಚೆ ಮಾಡಿಲ್ಲ.  ಡಿಕೆ ಶಿವಕುಮಾರ್ ಬಣದ ಶಾಸಕರು ದೆಹಲಿ ಪ್ರವಾಸ ವಿಚಾರ,  ಶಾಸಕರು ದೆಹಲಿಗೆ ಹೋಗಿರುವುದು ಗೊತ್ತಿಲ್ಲ. ನಾವು ದೆಹಲಿಗೆ ಹೋಗಿ ಹೇಳಿದ ಕೂಡಲೇ ಏನು ಬದಲಾಗಲ್ಲ. ಏನು ಮಾಡಬೇಕು ಎಂದು ಹೈಕಮಾಂಡ್ ತೀರ್ಮಾನ ಮಾಡುತ್ತದೆ.  ಹೈಕಮಾಂಡ್ ನಾಯಕರೇ ಅಂತಿಮವಾಗಿ ತೀರ್ಮಾನ ಮಾಡಬೇಕು ಎಂದು ಹೇಳಿದರು.

Key words: Power, sharing, issue: Minister Satish Jarkiholi advises CM, DCM