ಬೆಂಗಳೂರು,ನವೆಂಬರ್,21,2025 (www.justkannada.in): ಬೆಂಗಳೂರಲ್ಲಿ 7.11 ಕೋಟಿ ಹಣ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಮತ್ತೊಬ್ಬ ಆರೋಪಿಯನ್ನ ಬಂಧಿಸಿದ್ದು , 5.30 ಕೋಟಿ ರೂ. ಹಣವನ್ನೂ ವಶಕ್ಕೆ ಪಡೆದಿದ್ದಾರೆ.
ಸಿಎಂಎಸ್ ಮಾಜಿ ನೌಕರ ಝೇವಿಯರ್ ಬಂಧಿತ ಆರೋಪಿ. ಈತ ಕಾನ್ಸ್ ಟೇಬಲ್ ಅಣ್ಣಪ್ಪನ ಸ್ನೇಹಿತ ಎಂದು ಗುರುತಿಸಲಾಗಿದೆ. ಇಬ್ಬರು ಸೇರಿಕೊಂಡು ಈ ದರೋಡೆ ಸ್ಕೆಚ್ ಹಾಕಿದ್ದರು. ದರೋಡೆ ಪ್ರಕರಣ ಸಂಭಂಧ ಗೋವಿಂದಪುರ ಠಾಣೆಯ ಕಾನ್ಸ್ ಟೇಬಲ್ ಅಣ್ಣಪ್ಪ ನಾಯಕ್ ಎಂಬುವವರನ್ನು ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಅಣ್ಣಪ್ಪ ನಾಯ್ಕ್ ಇಡೀ ದರೋಡೆಯ ಮಾಸ್ಟರ್ ಮೈಂಡ್ ಎನ್ನಲಾಗಿದೆ.
ಇನ್ನು ಪ್ರಕರಣ ಸಂಬಂಧ 5.30 ಕೋಟಿ ರೂ . ಹಣವನ್ನ ಆಂಧ್ರದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉಳಿದ ಹಣದ ಸಮೇತ ಆರೋಪಿಗಳು ಎಸ್ಕೇಪ್ ಆಗಿದ್ದು, ಉಳಿದ ಆರೋಪಿಗಳಿಗಾಗಿ ಮತ್ತು ಹಣಕ್ಕಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
Key words: Rs 7 crore, robbery case, accused. arrested, Rs 5.30 crore. seized







