ಬೆಂಗಳೂರು,ನವೆಂಬರ್,21,2025 (www.justkannada.in): ನಾಯಕತ್ವದ ಬಗ್ಗೆ ವರಿಷ್ಠರ ಮಟ್ಟದಲ್ಲಿ ಒಪ್ಪಂದ ಆಗಿರಬಹುದು. ಈ ಬಗ್ಗೆ ವರಿಷ್ಠರೇ ನಿರ್ಧರಿಸಲಿ ಎಂದು ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಟಿ.ಬಿ ಜಯಚಂದ್ರ ತಿಳಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಟಿ.ಬಿ ಜಯಚಂದ್ರ, ಕಳೆದ ಒಂದು ವಾರದಿಂದ ದೆಹಲಿಯಲ್ಲಿದ್ದೆ. 7 ರಿಂದ 8 ಶಾಕರು ದೆಹಲಿಗೆ ಹೋಗಿದ್ದಾರೆ. ಸರ್ಕಾರ ಅಧಿಕಾರಕ್ಕೇರಿ ಎರಡುವರೆ ವರ್ಷ ಆಗಿದೆ. ಹೀಗಾಗಿ ನಾಯಕತ್ವ ಬದಲಾವಣೆ ಸಂಪುಟ ಪುನರಚನೆ ಚರ್ಚೆಗೆ ಬಂದಿದೆ. ನಾಯಕತ್ವ ಬದಲಾವಣೆ ಚರ್ಚೆ ಆಗುತ್ತಿದೆ ಶಾಸಕರ ಅಭಿಪ್ರಾಯ ಏನಿದೆ ಅಂತಾ ಹೈಕಮಾಂಡ್ ಗೆ ಗೊತ್ತಿದೆ. ನಾಯಕತ್ವ ಬಗ್ಗೆ ವರಿಷ್ಠರೇ ನಿರ್ಧಾರ ಮಾಡುತ್ತಾರೆ ಎಂದರು.
ಮಲ್ಲಿಕಾರ್ಜುನ ಖರ್ಗೆ ಬೆಂಗಳೂರಿಗೆ ಬರುತ್ತಿದ್ದಾರೆ. ಅವರನ್ನ ಭೇಟಿಯಾಗುವೆ. ನಾನು ಸಿಎಂ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಪಕ್ಷದಿಂದ ಬಂದಿರೋದು ಕಾಂಗ್ರೆಸ್ ಪಕ್ಷ ತಾಯಿ ಇದ್ದಂತೆ. ನಾವು ಮಕ್ಕಳು. ನಾವು ಒಟ್ಟಾಗಿ ಮುಂದಿನ ಚುನಾವಣೆ ಎದುರಿಸಬೇಕಾಗುತ್ತದೆ ಎಂದು ಟಿ.ಬಿ ಜಯಚಂದ್ರ ಹೇಳಿದರು.
Key words: agreement, leadership, High Command, decide, T.B. Jayachandra







