ಮೈಸೂರು, ನವೆಂಬರ್, 20,2025 (www.justkannada.in): ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕು ವರುಣ ವಿಧಾನಸಭಾ ಕ್ಷೇತ್ರದ ಮರಳೂರು ಗೊದ್ದನಪುರ ಗ್ರಾಮದಲ್ಲಿನ ಬಿಸಿಲು ಮಾರಮ್ಮನ ದೇವಾಲಯದ ನೂತನ ಕಳಸ ಗೋಪುರ ಉದ್ಘಾಟನೆಯನ್ನ ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ನೆರವೇರಿಸಿದರು.
ಬಳಿಕ ಮಾತನಾಡಿದ ಡಾ. ಯತೀಂದ್ರ ಸಿದ್ರಾಮಯ್ಯ, ದೇವಾಲಯಗಳು ಸಮುದಾಯ ಭವನಗಳು ಸಾರ್ವಜನಿಕರಿಗೆ ನೆಮ್ಮದಿ ಶಾಂತಿ ನೀಡುವ ತಾಣಗಳಾಗಿವೆ. ಆ ತಾಣಗಳನ್ನು ಸಾರ್ವಜನಿಕರು ಹಾಳಾಗದಂತೆ ನೋಡಿಕೊಳ್ಳಬೇಕು ಸ್ವಚ್ಛತೆ ಕಾಪಾಡುವ ಜೊತೆಗೆ ದೇವಾಲಯ ಮತ್ತು ಸಮುದಾಯ ಭವನಗಳ ಅಭಿವೃದ್ಧಿಗೆ ಹೆಚ್ಚು ಗಮನ ಕೊಡಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಕಾಗಿನೆಲೆ ಮೈಸೂರು ಶಾಖ ಮಠದ ಅರುಣ್ ಸ್ವಾಮೀಜಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ರಾಜಶೇಖರ್, ಗ್ರಾಮ ಪಂಚಾಯತಿ ಸದಸ್ಯ ಜಿ.ಎಂ ಸೂರ್ಯ ಕೃಷ್ಣ, ಶಿವಕುಮಾರ್, ಶಿವಣ್ಣ, ಮಾಲೆಗೌಡ ಗುರು ಮಹಾದೇವ, ಬಿ ಪುಟ್ಟಸ್ವಾಮಿ ಗೌಡತಿ ಯಜಮಾನ ಚಂದ್ರೇಗೌಡ ಚಂದ್ರು ಸೇರಿದಂತೆ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
Key words: MLC, Yathindra Siddaramaiah, inaugurate, Kalasa Gopuram, Temple







