ಶಿಕ್ಷಣ ಕೇವಲ ಉದ್ಯೋಗಕ್ಕಲ್ಲದೇ, ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಬೇಕು- ಪ್ರೀತ್ ಕುಶಲಪ್ಪ

ಮೈಸೂರು,ನವೆಂಬರ್,20,2025 (www.justkannada.in): ನಗರದ ಬನ್ನಿಮಂಟಪದಲ್ಲಿರುವ ಸೆಂಟ್ ಫಿಲೋಮಿನಾ ಕಾಲೇಜಿನ ಪ್ರಥಮ ಬ್ಯಾಚ್‌ ನ ಎಂಬಿಎ 58 ಹಾಗೂ ಎಂಸಿಎ 48 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 106 ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ಸಂತ ಫಿಲೋಮಿನ ಕಾಲೇಜಿನಲ್ಲಿ 2025ನೇ ಸಾಲಿನ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಇನ್ಫೋಸಿಸ್ ಲಿಮಿಟೆಡ್‌ನ ಅಸೋಷಿಯೇಟ್ ಉಪಾಧ್ಯಕ್ಷೆ ಪ್ರೀತ್ ಕುಶಲಪ್ಪ ಕೊಡಿರಾ ಅವರು ಪದವಿ ಪ್ರದಾನ ಮಾಡಿದರು. ಬಳಿಕ ಮಾತನಾಡಿದ ಅವರು, ಜೀವನದಲ್ಲಿ ನಿಖರತೆ ಎಂಬುದು ಬಹಳ ಮುಖ್ಯ. ಅಲ್ಲದೇ ಬದುಕಿನಲ್ಲಿ ಹಲವು ಅಡೆತಡೆಗಳು ಎದುರಾಗುತ್ತವೆ. ಅವುಗಳನ್ನು ಬಗೆಹರಿಸಿಕೊಳ್ಳುವ ಹಾಗೂ ಸಿಕ್ಕ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಕೆಲಸವಾಗಬೇಕು. ಭವಿಷ್ಯದ ದೃಷ್ಟಿಯಿಂದ ಇವತ್ತಿನ ನಿರ್ಧಾರಗಳು ಅತಿ ಮುಖ್ಯವಾದದ್ದು. ಕಲಿತ ಶಿಕ್ಷಣ ಕೇವಲ ಉದ್ಯೋಗಕ್ಕಾಗಿ ಅಲ್ಲದೇ, ಉತ್ತಮವಾದ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಬೇಕು ಎಂದರು.

ಪ್ರಸ್ತುತ ಪ್ರಪಂಚ ತಂತ್ರಜ್ಞಾನದ ಹಿಂದೆ ಓಡುತಿದ್ದು, ತಂತ್ರಜ್ಞಾನದಿಂದಲೇ ಜಗತ್ತು ಅಭಿವೃದ್ಧಿ ಕಾಣಲು ಸಾಧ್ಯವಾಗಿದೆ. ಕೃತಕ ಬುದ್ಧಿ ಮತ್ತೆ(ಎಐ), ಕ್ಲೌಡ್, ಸೈಬರ್ ಸೆಕ್ಯೂರಿಟಯಂತ ತಂತ್ರಜ್ಞಾನಗಳು ಹೆಚ್ಚು ಪ್ರಚಲಿತದಲಿದ್ದು, ಭವಿಷ್ಯದಲ್ಲಿ ಹೆಚ್ಚು ಉಪಯುಕ್ತವಾಗಲಿದೆ. ಪ್ರತಿ ನಿತ್ಯ ಹೊಸತನ್ನು ಕಲಿಯುವ ಆಸಕ್ತಿ ಮೂಡಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.

ಎಂಡಿಇಎಸ್ ಅಧ್ಯಕ್ಷ ಡಾ.ಫ್ರಾನ್ಸಿಸ್ ಸೆರ್ರಾವೋ, ಆಡಳಿತಧಿಕಾರಿಗಳಾದ ಡಾ.ಲೂರ್ದ್ ಪ್ರಸಾದ್ ಜೋಸೆಫ್, ಜ್ಞಾನಪ್ರಗಾಸಂ, ಪ್ರಾಂಶುಪಾಲ ಡಾ.ರವಿ ಜೆ.ಡಿ ಸಲ್ಡಾನ್ಹಾ, ಎಂಸಿಎ ವಿಭಾಗದ ಅಧ್ಯಕ್ಷೆ ವಿ.ಯು ರೀನಾ, ಎಂಬಿಎ ಅಧ್ಯಕ್ಷ ಡಾ.ಐಸಾಕ್ ಜಾರ್ಜ್ ಮತ್ತಿತರರು ಉಪಸ್ಥಿತರಿದ್ದರು.

Key words: Mysore, St. Philomena’s College, Graduation ceremony, students