ಸಿಎಂ ಸಿದ್ದರಾಮಯ್ಯ ಕೊಟ್ಟ ಮಾತು ತಪ್ಪೋದಿಲ್ಲ: ಅದೃಷ್ಟ ಇದ್ರೆ ನಮ್ಮಣ್ಣ ಸಿಎಂ ಆಗ್ತಾರೆ- ಡಿಕೆ ಸುರೇಶ್

ಬೆಂಗಳೂರು,ನವೆಂಬರ್,20,2025 (www.justkannada.in):  ಸಿಎಂ ಸಿದ್ದರಾಮಯ್ಯ ಕೊಟ್ಟ ಮಾತನ್ನ ತಪ್ಪುವುದಿಲ್ಲ. ಕೊಟ್ಟ ಮಾತಿನಂತೆ ನಡೆಯುವವರು ಸಿಎಂ ಸಿದ್ದರಾಮಯ್ಯ. ಅದೃಷ್ಟ ಇದ್ದರೆ ನಮ್ಮಣ್ಣ ಸಿಎಂ ಆಗುತ್ತಾರೆ ಎಂದು  ಮಾಜಿ ಸಂಸದ ಡಿಕೆ ಸುರೇಶ್ ಹೇಳಿಕೆ ನೀಡಿದ್ದಾರೆ.

ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಡಿ.ಕೆ ಸುರೇಶ್,  ಎಲ್ಲರೂ ಹೈಕಮಾಂಡ್ ಅಣತಿಯಂತೆಯೇ ಕೆಲಸ ಮಾಡುತ್ತಿದ್ದಾರೆ. ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ,  ರಾಜ್ಯದಲ್ಲಿ ದೇಭವರಾಜ ಅರಸು, ಎಸ್.ಎಂ ಕೃಷ್ಣ ಎಲ್ಲರೂ  ಹೈಕಮಾಂಡ್ ಅಣತಿಯಂತೆಯೇ ಕೆಲಸ ಮಾಡಿದ್ದಾರೆ. ಸರ್ಕಾರ ತರಲು ಹಗಲು ರಾತ್ರಿ ಕೆಲಸ ಮಾಡಿರುವುದೇ ಡಿಕೆ ಶಿವಕುಮಾರ್.  ಜವಾಬ್ದಾರಿ ತೆಗೆದುಕೊಂಡು ಕಾರ್ಯಕರ್ತರಿಗೆ ಚೈತನ್ಯ ತುಂಬಿದ್ದಾರೆ. ಡಿಕೆ ಶಿವಕುಮಾರ್ ಹುಮ್ಮಸ್ಸು ತುಂಬಿದ್ದಾರೆ.  ಜನರಿಗೆ ಕೊಟ್ಟ ಮಾತಿನಂತೆ ಡಿಕೆ ಶಿವ ಆಡಳಿತ ಕೊಡುತ್ತಿದ್ದಾರೆ ಎಂದರು.

ಪಕ್ಷ  ಏನ್ ಹೇಳುತ್ತೋ ಅದನ್ನ ಪಾಲಿಸಬೇಕು. . ಸಿಎಂ, ಡಿಸಿಎಂ, ವರಿಷ್ಠರು ಕೂತು ಚರ್ಚೆ ಮಾಡುತ್ತಾರೆ  ಅವರವರ ಅಭಿಮಾನಿಗಳಿಗೆ ಆಸೆ ಇದ್ದೇ ಇರುತ್ತೆ ಅಲ್ವಾ..? ಎಂದು ಡಿ.ಕೆ ಸುರೇಶ್ ತಿಳಿಸಿದರು.

Key words: CM, Siddaramaiah, lucky, DK Shivakumar, DK Suresh