ಅಧಿಕಾರ ಹಸ್ತಾಂತರ ಬಗ್ಗೆ ಹೈಕಮಾಂಡ್ ಏನೂ ಹೇಳಿಲ್ಲ- ಗೃಹ ಸಚಿವ ಡಾ.ಜಿ.ಪರಮೇಶ್ವರ್

ಬೆಂಗಳೂರು,ನವೆಂಬರ್,20,2025 (www.justkannada.in):  ಎರಡುವರೆ ವರ್ಷ ಆಯ್ತು ಅಂತಾ ಮಹತ್ವ ಕೊಡುವ  ಅಗತ್ಯವಿಲ್ಲ. ಅಧಿಕಾರ ಹಸ್ತಾಂತರ ಬಗ್ಗೆ ಹೈಕಮಾಂಡ್ ಏನೂ ಹೇಳಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಎರಡುವರೆ ವರ್ಷ ಆಯ್ತು ಅಂತಾ ಹೈಕಮಾಂಡ್ ಗೂ ಗೊತ್ತಿದೆ.   ಹೈಮಾಂಡ್ ನವರು ಅಧಿಕಾರ ಹಸ್ತಾಂತರ ಬಗ್ಗೆ ಏನೂ ಹೇಳಿಲ್ಲ. ಪಕ್ಷದ ಹೈಕಮಾಂಡ್   ಈ ವಿಚಾರ ಹೇಳಿದಾಗ ಮಹತ್ವ ಬರುತ್ತೆ ಇದುವರೆಗೆ ಎಲ್ಲೂ ಹೈಕಮಾಂಡ್ ನಮಗೆ ಆ ವಿಚಾರ ಹೇಳಿಲ್ಲ. ಸಿಎಲ್ ಪಿ ಸಭೆಯಲ್ಲೂ  ಆ ವಿಚಾರದ ಬಗ್ಗೆ ಚರ್ಚೆಗೆ ಬಂದಿಲ್ಲ ಹಾಗಾದರೆ ಅದಕ್ಕೆ ಯಾಕೆ ಮಹತ್ವದ ಕೊಡಬೇಕು ಎಂದು ಪ್ರಶ್ನಿಸಿದರು.

ಸಂಪುಟ ಪುನಾರಚನೆ ಬೇರೆ ಏನೇ ಇದ್ರೂ ಹೈಕಮಾಂಡ್ ತೀರ್ಮಾನ ಮಾಡುತ್ತೆ.  ನಮಗೆ ನಾವೇ ಏನೇನೋ ಹೇಳಿಕೊಂಡರೆ ಅದಕ್ಕೆ ಮಹತ್ವ ಇಲ್ಲ. ಏನೇ ಇದ್ದರೂ ಎಲ್ಲವನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಪರಮೇಶ್ವರ್ ತಿಳಿಸಿದರು.

Key words: High command, power Sharing, Home Minister, Dr. G. Parameshwar