ಬೆಂಗಳೂರು, ನ.೧೯,೨೦೨೫ : ಭಾರತದಲ್ಲಿನ ಅಮೆರಿಕನ್ ಕಾನ್ಸುಲ್ ಜನರಲ್ ಕ್ರಿಸ್ ಹಾಡ್ಜಸ್ ಮತ್ತು ಪೋಲೆಂಡ್ ದೇಶದ ಡಿಜಿಟಲೀಕರಣ ಖಾತೆ ಸಹಾಯಕ ಸಚಿವ ರಫಾಲ್ ರೊಸಿನ್ಸ್ಕಿ ಅವರು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರನ್ನು ಬುಧವಾರ ಪ್ರತ್ಯೇಕವಾಗಿ ಭೇಟಿಯಾಗಿ, ಬಂಡವಾಳ ಹೂಡಿಕೆ ಮತ್ತು ನಾನಾ ವಲಯಗಳಲ್ಲಿ ಸಹಭಾಗಿತ್ವ ವರ್ಧನೆ ಕುರಿತು ಮಾತುಕತೆ ನಡೆಸಿದರು.
ವಿಧಾನಸೌಧದಲ್ಲಿ ನಡೆದ ಈ ಭೇಟಿಗಳಲ್ಲಿ ಮೊದಲಿಗೆ ಕ್ರಿಸ್ ಅವರೊಂದಿಗೆ ಮಾತುಕತೆ ನಡೆಸಿದ ಸಚಿವರು, ಅಮೆರಿಕದ ವಿಶ್ವವಿದ್ಯಾಲಯಗಳು, ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳು, ಮೆಡ್-ಟೆಕ್ ಕಂಪನಿಗಳಿಗೆ ರಾಜ್ಯದಲ್ಲಿ ಹೆಚ್ಚಿನ ಅವಕಾಶವಿರುವ ಸಂಗತಿಯನ್ನು ಮನದಟ್ಟು ಮಾಡಿಕೊಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಪೋಲೆಂಡ್ ನಿಯೋಗದ ಭೇಟಿ
ಪೋಲೆಂಡ್ ಸರಕಾರದಲ್ಲಿ ಡಿಜಿಟಲೀಕರಣ ಖಾತೆಯ ಉಪಮಂತ್ರಿಯಾಗಿರುವ ರಫಾಲ್ ರೊಸಿನ್ಸ್ಕಿ ನೇತೃತ್ವದ ಉನ್ನತ ಮಟ್ಟದ ನಿಯೋಗವು ಉನ್ನತ ಶಿಕ್ಷಣ, ಸಂಶೋಧನೆ, ಆಧುನಿಕ ತಯಾರಿಕೆ. ವಾಣಿಜ್ಯ, ತಂತ್ರಜ್ಞಾನ ಮತ್ತು ರಕ್ಷಣಾ ಉದ್ಯಮಗಳಲ್ಲಿ ಕರ್ನಾಟಕದೊಂದಿಗೆ ಸಹಭಾಗಿತ್ವ ಹೊಂದಲು ಇರುವ ಅವಕಾಶಗಳ ಬಗ್ಗೆ ಸಚಿವ ಎಂ ಬಿ ಪಾಟೀಲರೊಡನೆ ಮಾತುಕತೆ ನಡೆಸಿದೆ.
ಭಾರತ ಮತ್ತು ಪೋಲೆಂಡ್ 2023ರಿಂದ 2028ರವರೆಗೆ ಚಾಲ್ತಿಯಲ್ಲಿರುವ ಐದು ವರ್ಷಗಳ ಕ್ರಿಯಾ ಯೋಜನೆಯನ್ನು ಹೊಂದಿವೆ. ಇದರಡಿಯಲ್ಲಿ ಗಣಿಗಾರಿಕೆ, ಸೈಬರ್ ಭದ್ರತೆ, ಆರೋಗ್ಯ, ಇಂಧನ ಮತ್ತು ಸುಸ್ಥಿರತೆ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ಹೊಂದಿವೆ. ಇದನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಪೋಲೆಂಡ್ ಒಲವನ್ನು ವ್ಯಕ್ತಪಡಿಸಿದೆ. ಅವರಿಗೆ ರಾಜ್ಯದಲ್ಲಿರುವ ಕೈಗಾರಿಕಾ ಕಾರ್ಯಪರಿಸರ, ನೀತಿ, ರಿಯಾಯಿತಿ ಇತ್ಯಾದಿಗಳ ಬಗ್ಗೆ ವಿವರಿಸಲಾಯಿತು ಎಂದು ಪಾಟೀಲ ವಿವರಿಸಿದ್ದಾರೆ.
ಈ ನಿಯೋಗದಲ್ಲಿ ದೆಹಲಿಯಲ್ಲಿನ ಪೋಲೆಂಡ್ ಎಂಬೆಸಿಯ ಮುಖ್ಯಸ್ಥ ಪಿಯೋಟರ್ ಸ್ವಿಟೈಸ್ಕಿ, ಮುಂಬೈನಲ್ಲಿರುವ ಪೋಲೆಂಡ್ ಎಂಬೆಸಿ ಮುಖ್ಯಸ್ಥ ಟೋಮಾಸ್ ವೆಲ್ಗೋಮಾಸ್ ಇದ್ದರು.
ಬೃಹತ್ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತರಾದ ಗುಂಜನ್ ಕೃಷ್ಣ, ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜು ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
key words: Investment, partnership discussions, American Consul General Chris, Polish delegation, M B Patil.

SUMMARY:
Investment, partnership discussions with American Consul General Chris and Polish delegation: M B Patil.

US Consul General to India Chris Hodges and Polish Assistant Minister for Digitalisation Rafal Rosinski met Minister of Large and Medium Enterprises M B Patil separately on Wednesday to discuss investment and enhancing partnerships in various sectors.






