MYSORE UINERSITY: ಹಾಸ್ಟೆಲ್‌ ಮೂಲಸೌಲಭ್ಯಕ್ಕೆ “ ಡೆಡ್‌ ಲೈನ್‌” ವಿಧಿಸಿದ ರಿಜಿಸ್ಟ್ರಾರ್ ಎಂ.ಕೆ ಸವಿತಾ

 

ಮೈಸೂರು, ನ.೧೯,೨೦೨೫ : ಮೈಸೂರು ವಿಶ್ವವಿದ್ಯಾಲಯದ ವಿದ್ಯಾರ್ಥಿ ವಸತಿ ನಿಲಯಗಳಲ್ಲಿ ವಿದ್ಯುತ್‌, ಕುಡಿಯುವ ನೀರು ಹಾಗೂ ಶೌಚಾಲಯಗಳಂತಹ ಮೂಲಸೌಕರ್ಯಗಳ ಕೊರತೆಯ ಬಗ್ಗೆ ವಿದ್ಯಾರ್ಥಿಗಳಿಂದ ಬಂದ ಆಕ್ಷೇಪಣೆಗಳಿಗೆ ಸ್ಪಂದಿಸಿ, ಕುಲಸಚಿವೆ ಎಂ.ಕೆ. ಸವಿತಾ ಹಾಸ್ಟೆಲ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪರಿಶೀಲನಾ ವೇಳೆ ಹಲವು ಸಮಸ್ಯೆಗಳು ಬೆಳಕಿಗೆ ಬಂದಿದ್ದು, ತಕ್ಷಣದ ಸುಧಾರಣಾ ಕ್ರಮಗಳಿಗೆ ಸೂಚನೆ ನೀಡಿದರು. ಇದೇ ಸಂದರ್ಭದಲ್ಲಿ, ಮೂಲಸೌಲಭ್ಯಗಳ ಶಾಶ್ವತ ಸುಧಾರಣೆಗಾಗಿ ನೀರಿನ ಶುದ್ಧೀಕರಣ ಘಟಕಗಳ ನವೀಕರಣ, ಶೌಚಾಲಯಗಳ ದುರಸ್ತಿ ಹಾಗೂ ಭದ್ರತಾ ವ್ಯವಸ್ಥೆ ಬಲಪಡಿಸುವ ಕೆಲಸಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಕುಲಸಚಿವೆ ಎಂ.ಕೆ. ಸವಿತಾ “ಜಸ್ಟ್‌ ಕನ್ನಡ” ಕ್ಕೆ ತಿಳಿಸಿದರು.

ಮೈಸೂರು ವಿವಿ ಹಾಸ್ಟೆಲ್‌ ಗಳ ಜತೆಗೆ ಮಹಾರಾಜ, ಯುವರಾಜ ಕಾಲೇಜಿಗಳ ವಸತಿ ನಿಲಯಗಳಿಗೂ ತೆರಳಿ ಸಮಸ್ಯೆ ಗಮನಿಸಿರುವೆ. ಕ್ಯಾಂಪಸ್‌ ನಲ್ಲಿ ವಿದ್ಯುತ್‌ ದೀಪದ ಸಮಸ್ಯೆ ಇತ್ಯರ್ಥಕ್ಕೆ ಸಂಬಂಧಿಸಿದಂತೆ ಪಿಪಿಪಿ ಮಾದರಿಯಲ್ಲಿ ಯೋಜನೆ ಸಿದ್ಧಪಡಿಸಿ ಒಡಂಬಡಿಕೆ ಮಾಡಿಕೊಳ್ಳಲು ಮುಂದಾಗಿದ್ದೆವು. ಆದರೆ ಚಳಿಗಾಲವಾದ್ದರಿಂದ ಸಂಜೆ ವೇಳೆ ಬೇಗನೆ ಕತ್ತಲಾವರಿಸುತ್ತಿರುವ ಹಿನ್ನೆಲೆಯಲ್ಲಿ ಸಮಸ್ಯೆ ಅರಿತು ವಿವಿಯೇ ವಿದ್ಯುತ್‌ ದೀಪಗಳ ದುರಸ್ತಿಗೆ ಮುಂದಾಗಿದೆ. ಒಟ್ಟು ೧೨೦ ದೀಪಗಳು ಅವಶ್ಯಕವಿದ್ದು, ಸದ್ಯ ತುರ್ತಾಗಿ ೬೦ ದೀಪಗಳನ್ನು ಅಳವಡಿಸಲು ಸೂಚಿಸಲಾಗಿದೆ ಎಂದು ವಿವರಿಸಿದರು.

ಕುಲಸಚಿವೆ ಮನವಿ

ವಿದ್ಯಾರ್ಥಿಗಳು ಮೂಲ ಸೌಲಭ್ಯ ಸಮಸ್ಯೆಗಳ ಬಗ್ಗೆ ಚಿಂತಿಸುವುದನ್ನ ಬಿಡಿ ಅದನ್ನ ಸರಿಪಡಿಸಲು ವಿವಿ ಮುಂದಾಗಿದೆ. ಈ ಸಂಬಂಧ ಇಂಜಿನಿಯರಿಂಗ್ ವಿಭಾಗದ ಸಿಬ್ಬಂದಿಗಳಿಗೆ ಹತ್ತು ದಿನಗಳ ಡೆಡ್ ಲೈನ್ ನಿಗದಿಪಡಿಸಲಾಗಿದೆ. ಅಷ್ಟರಲ್ಲಿ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಲಾಗುವುದು. ಅದ್ದರಿಂದ ವಿದ್ಯಾರ್ಥಿಗಳು  ವಿದ್ಯಾಭ್ಯಾಸ ಬಗ್ಗೆ ಗಮನ ಹರಿಸುವಂತೆ ಕುಲಸಚಿವೆ ಎಂ.ಕೆ ಸವಿತಾ ಮನವಿ ಮಾಡಿದರು.

ಹೆಚ್ಚುವರಿ ಸಮಸ್ಯೆ:

ಈ ನಡುವೆ, ಹಾಸ್ಟೆಲ್‌ಗಳಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ವಾಸಿಸುವುದೇ ಸಮಸ್ಯೆಯ ಪ್ರಮುಖ ಕಾರಣ ಎಂದು ವಿವಿ ರಿಜಿಸ್ಟ್ರಾರ್ ಅಭಿಪ್ರಾಯಪಟ್ಟಿದ್ದಾರೆ.

ಅಧಿಕಕ್ಷೇತ್ರದಲ್ಲಿ ಪ್ರಥಮ ವರ್ಷ ವಿದ್ಯಾರ್ಥಿಗಳು ಹಾಗೂ ಹೊರ ಜಿಲ್ಲೆಗಳ ವಿದ್ಯಾರ್ಥಿಗಳು ತಾತ್ಕಾಲಿಕವಾಗಿ ಹಾಸ್ಟೆಲ್‌ಗಳಲ್ಲಿ ನೆಲೆಯೂರಿರುವುದರಿಂದ, ನೀರು–ವಿದ್ಯುತ್ ಒತ್ತಡ ಹೆಚ್ಚಿದ್ದು, ಶೌಚಾಲಯಗಳು ಮತ್ತು ಸ್ವಚ್ಛತೆಯ ಮೇಲೂ ಪರಿಣಾಮ ಬೀರಿದೆ ಎಂದರು.

“ನಿಬಂಧನೆ ಉಲ್ಲಂಘಿಸಿ ಹೆಚ್ಚುವರಿ ವಾಸಿಸುವ ವಿದ್ಯಾರ್ಥಿಗಳನ್ನು ಗುರುತಿಸಿ, ತಕ್ಷಣ ತೆರವುಗೊಳಿಸುವ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ರಿಜಿಸ್ಟ್ರಾರ್ ಸವಿತಾ  ಸ್ಪಷ್ಟಪಡಿಸಿದರು. ವಿದ್ಯಾರ್ಥಿಗಳ ಕಲ್ಯಾಣ ಮುಖ್ಯವಾದರೂ, ಹಾಸ್ಟೆಲ್ ಸಾಮರ್ಥ್ಯಕ್ಕಿಂತ ಮೀರಿದ ವಾಸವನ್ನು ಅನುಮತಿಸಲಾಗುವುದಿಲ್ಲ ಎಂದು ಇದೇ ವೇಳೆ ಕುಲಸಚಿವೆ ಸವಿತಾ ಸ್ಪಷ್ಡಪಡಿಸಿದರು.

ಪ್ರಶಂಸೆ:

ವಿದ್ಯಾರ್ಥಿಗಳು ಉತ್ತಮ ವಸತಿಗೆ ಆಗ್ರಹಿಸುತ್ತಿರುವ ಹಿನ್ನೆಲೆಯಲ್ಲಿ ವಿವಿ ಆಡಳಿತ ತುರ್ತು ಕ್ರಮಕ್ಕೆ ಮುಂದಾಗಿರುವುದು ಪ್ರಶಂಸನೀಯ ಘಟನೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

KEY WORDS: “Deadline”, Mysore University, hostel infrastructure, Registrar, moves to evict excess students.

SUMMARY:

“Deadline” for Mysore University hostel infrastructure: Registrar moves to evict excess students.

Responding to the objections received from students regarding the lack of basic facilities like electricity, drinking water and toilets in the student hostels of the University of Mysore, Registrar M.K. Savitha visited the hostels and inspected them.

Several problems came to light during the inspection and immediate improvement measures were instructed. At the same time, for the permanent improvement of the infrastructure, priority is being given to the renovation of water purification units, repair of toilets and strengthening of security systems, Registrar M.K. Savitha told “Just Kannada”.