ಚಳಿ ಹಿನ್ನಲೆ ಹೆಚ್ಚುವರಿ ಕಂಬಳಿಗೆ ನಟ ದರ್ಶನ್ ಮನವಿ: ವಿಚಾರಣೆ ಮುಂದೂಡಿದ ಕೋರ್ಟ್

ಬೆಂಗಳೂರು,ನವೆಂಬರ್,19,2025 (www.justkannada.in):  ಚಳಿಗಾಲ ಹಿನ್ನೆಲೆಯಲ್ಲಿ ಮನೆಯಿಂದ ತಂದುಕೊಟ್ಟಿರುವ ಹೆಚ್ಚುವರಿ ಕಂಬಳಿಯನ್ನ ನೀಡುವಂತೆ ಸೂಚಿಸಲು ಆರೋಪಿ ನಟ ದರ್ಶನ್ ನ್ಯಾಯಾಲಯದಲ್ಲಿ ಮನವಿ ಮಾಡಿದರು.

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಆರೋಪಿ ನಟ ದರ್ಶನ್ ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ಆರೋಪಿ ನಾಗರಾಜ್ ಕೋರ್ಟ್​ ನಲ್ಲಿ ‘ಮನೆಯಿಂದ ತಂದುಕೊಟ್ಟ ಕಂಬಳಿ ನೀಡುತ್ತಿಲ್ಲ. ಹೆಚ್ಚು ಚಳಿ ಇದ್ದರೂ ಹೆಚ್ಚುವರಿ ಕಂಬಳಿ ನೀಡುತ್ತಿಲ್ಲ’ ಎಂದು ಕೋರ್ಟ್ ಎದುರು ಹೇಳಿದ್ದಾರೆ.

ಈ ವೇಳೆ ನಟ ದರ್ಶನ್ ‘ತುಂಬಾನೇ ಚಳಿ ಇದೆ. ನಾವ್ಯಾರೂ ರಾತ್ರಿ ಮಲಗುತ್ತಿಲ್ಲ. ಹೆಚ್ಚುವರಿ ಕಂಬಳಿ ಕೊಡಿಸಿ’ ಎಂದು ಕೋರ್ಟ್​ಗೆ ಮನವಿ ಮಾಡಿದರು. ಈ ಮನವಿ ಬಳಿಕ  ನ್ಯಾಯಾಧೀಶರು ‘ಪದೇ ಪದೇ ಆದೇಶ ಮಾಡಿದರೂ ಹೀಗ್ಯಾಕೆ ಮಾಡುತ್ತಾರೆ? ಚಳಿ ಇದ್ದಾಗ ಕಂಬಳಿ ಕೊಡಬೇಕಲ್ಲವೇ’ ಎಂದು ಪ್ರಶ್ನೆ ಮಾಡಿದರು. ದರ್ಶನ್​ಗೆ ಕಂಬಳಿಕೊಡಲು ಜೈಲು ಅಧಿಕಾರಿಗಳಿಗೆ  ಸೂಚನೆ ನೀಡಿದ ನ್ಯಾಯಾಧೀಶರು ಪ್ರಕರಣದ ವಿಚಾರಣೆಯನ್ನು ಕೋರ್ಟ್ ವಿಚಾರಣೆ ಡಿಸೆಂಬರ್ 3ಕ್ಕೆ ಮುಂದೂಡಿದ್ದಾರೆ.

Key words: Actor, Darshan, request, extra blankets, Court