ಕರ್ನಾಟಕದ ಅಯ್ಯಪ್ಪ ಭಕ್ತರಿದ್ದ ವ್ಯಾನ್ ಗೆ ಹಾಲಿನ ವ್ಯಾನ್ ಡಿಕ್ಕಿ: ಓರ್ವ ಸಾವು, ಇಬ್ಬರು ಗಂಭೀರ

ದಿಂಡಿಗಲ್, ನವೆಂಬರ್,18,2025 (www.justkannada.in):  ಅಯ್ಯಪ್ಪ ದರ್ಶನ ಮುಗಿಸಿ ವಾಪಸ್ ಕರ್ನಾಟಕಕ್ಕೆ ಆಗಮಿಸುತ್ತಿದ್ದ ಅಯ್ಯಪ್ಪ ಭಕ್ತರಿದ್ದ ವ್ಯಾನ್ ಗೆ ಹಾಲಿನ ವ್ಯಾನ್ ಡಿಕ್ಕಿಯಾಗಿ ಓರ್ವ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ದಿಂಡಿಗಲ್ ಜಿಲ್ಲೆ ಪಟ್ಟಿವೀರನ್ಪಟ್ಟಿ ಪಕ್ಕ, ಸುಂದರರಾಜಪುರಂ ಪೆಟ್ರೋಲ್ ಪಂಪ್ ಹತ್ತಿರ ನಡೆದಿದೆ.

ಶಬರಿಮಲೆ ದರ್ಶನ ಮುಗಿಸಿ ಕರ್ನಾಟಕಕ್ಕೆ ವಾಪಸ್ ಆಗುತ್ತಿದ್ದ ವೇಳೆ  ಅಯ್ಯಪ್ಪ ಭಕ್ತರಿದ್ದ ವಾಹನಕ್ಕೆ ಹಾಲಿನ ವ್ಯಾನ್ ಡಿಕ್ಕಿಯಾಗಿದ್ದು ಭಕ್ತರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇಬ್ಬರು ಅಯ್ಯಪ್ಪ ಭಕ್ತರು ಗಂಭೀರ ಗಾಯಗೊಂಡು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು , ಘಟನೆ ಕುರಿತು ವಟ್ಟಲಕುಂದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Key words: Milk van, collides, Ayyappa, devotees , One dead,