ಮೈಸೂರು,ನವೆಂಬರ್,17,2025 (www.justkannada.in): ಮೈಸೂರಿನಲ್ಲಿ ನವೆಂಬರ್ 22, 2025ರಂದು CASA BACARDÍ on tourನ ಅಂಗವಾಗಿ ಪ್ರತೀಕ್ ಕುಹಾದ್ ಅವರ ಸಾರಥ್ಯದಲ್ಲಿ ಅತಿದೊಡ್ಡ ಪಾರ್ಟಿ ನಡೆಯಲಿದೆ. ಸೈಲೆಂಟ್ ಶೋರ್ಸ್ ರೆಸಾರ್ಟ್ನಲ್ಲಿ ನಡೆಯಲಿರುವ ಈ ಕಾನ್ಸರ್ಟ್ನಲ್ಲಿ ಪ್ರತೀಕ್ ಅವರ ಶೈಲಿಯ ಪ್ರಸಿದ್ಧ ಮೆಲೊಡಿ ಹಾಡುಗಳ ಜೊತೆಗೆ ಜೋಶ್ ಹೆಚ್ಚಿಸುವ ಉತ್ಸಾಹಭರಿತ ಹಾಡುಗಳೂ ಇರಲಿದೆ. ಇದು ಮ್ಯೂಸಿಕ್ ನ ಅತಿದೊಡ್ಡ ಸೆಲೆಬ್ರೇಷನ್!
ಕಳೆದ ಐದು ಆವೃತ್ತಿಗಳಲ್ಲಿ CASA BACARDÍ on tour ಭಾರತದ ದ್ವೀತಿಯ ಹಾಗೂ ತೃತೀಯ ಮಟ್ಟದ ಬೃಹತ್ ನಗರಗಳಲ್ಲಿ ಅತ್ಯಂತ ಪ್ರಸಿದ್ಧ ಕಾನ್ಸರ್ಟ್ ಎನಿಸಿಕೊಂಡಿದೆ. Lucky Ali, Amit Trivedi, Nucleya, Ritviz, Anuv Jain, Talwiinder, KING ಸೇರಿದಂತೆ ಸಾಕಷ್ಟು ಜನರು ಈ ಕಾನ್ಸರ್ಟ್ನಲ್ಲಿ ಭಾಗವಹಿಸಿದ್ದಾರೆ. ಲೈವ್ ಕಾರ್ನ್ಸರ್ಟ್ನ ಮೂಲಕ ಜನರನ್ನು ಹಿಂದೆಂದೂ ಕಾಣದಂತೆ ಮನೋರಂಜಿಸುತ್ತಿರುವ CASA BACARDÍ ಹಲವಾರು ಡಿಜಿಟಲ್ ಕ್ಯಾಂಪೇನ್ ಗಳ ಮೂಲಕ ಕೋಟ್ಯಂತರ ಜನರನ್ನು ತಲುಪುತ್ತಿದೆ.
ಭಾರತದ ಅತ್ಯಂತ ಪ್ರಸಿದ್ಧ ಗಾಯಕ ಹಾಗೂ ಸಾಹಿತ್ಯ ರಚನೆಕಾರ ಪ್ರತೀಕ್ ಕುಹಾದ್ ತಮ್ಮ ಸಂಗೀತದ ಮೂಲಕ ಮೈಸೂರನ್ನು ಮನರಂಜಿಸಲು ಬರುತ್ತಿದ್ದಾರೆ. Cold/Mess, Kasoor, Dil Beparwah ಸೇರಿದಂತೆ ಇನ್ನೂ ಸಾಕಷ್ಟು ಹಾಡುಗಳ ಮೂಲಕ ಜಗತ್ತಿನಾದ್ಯಂತ ಕೇಳುಗರನ್ನು ಗಳಿಸಿರುವ ಟವರು ವಿವಿಧ ಬ್ರ್ಯಾಂಡ್ ಗಳೊಂದುಗೆ ಕೆಲಸ ಮಾಡುತ್ತಾ ಸಂಗೀತ ಜಾಗತಿಕ ಭಾಷೆ ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಮುಂಬರುವ ಕಾನ್ಸರ್ಟ್ ಕುರಿತು ಮಾತನಾಡಿದ ಬಕಾರ್ಡಿ ಇಂಡಿಯಾದ ಮಾರ್ಕೆಟಿಂಗ್ ಡೈರೆಕ್ಟರ್ ಮಹೇಶ್ ಕಂಚನ್, ʻಪ್ರತೀಕ್ ನ ಮ್ಯೂಸಿಕ್ ಅಂದರೆ ಎಲ್ಲರನ್ನೂ ಮನರಂಜಿಸುವ ಮ್ಯೂಸಿಕ್. ಅದರಲ್ಲೂ ಈಗಿನ ಜೆನ್ ಝ಼ೀ ಯುವಜನತೆಗೆ ಇಷ್ಟವಾಗುವ ರೀತಿಯ ಮ್ಯೂಸಿಕ್. ಮೈಸೂರಿನ ಜನ ಈ ಕಾನ್ಸರ್ಟ್ ಅನ್ನು ಬಹಳ ಇಷ್ಟಪಡುತ್ತಾರೆ ಎಂಬ ನಂಬಿಕೆ ಇದೆʼ ಎಂದರು.
WMS Entertainmentನ ಸಹಸಂಸ್ಥಾಪಕ ಅಕ್ಷತ್ ಕುಮಾರ್ ಮಾತನಾಡಿ, ʼನಾನು ಹಲವು ವರ್ಷಗಳಿಂದ CASA BACARDÍ on tourನಲ್ಲಿ ಭಾಗಿಯಾಗಿದ್ದೇನೆ. ಈ ಕಾರ್ಯಕ್ರಮವನ್ನು ಮತ್ತೆ ಆಯೋಜಿಸುತ್ತಿರುವುದು ಖುಷಿಯ ವಿಚಾರ. ಈ ವರ್ಷ ನಾವು ಮತ್ತೊಮ್ಮೆ ಮನೋರಂಜನೆಯ ಮತ್ತೊಂದು ಮಜಲನ್ನು ಜನರಿಗೆ ತೋರಿಸಲಿದ್ದೇವೆ. ಇದು ನಮ್ಮ ಮತ್ತೊಂದು ಮೈಲಿಗಲ್ಲುʼ ಎಂದರು.
ಪ್ರಸ್ತುತ ಐದನೆಯ ಆವೃತ್ತಿಯಲ್ಲಿರುವ CASA BACARDÍ on tour ದೇಶದಾದ್ಯಂತ 10ಕ್ಕೂ ಹೆಚ್ಚು ಸ್ಥಳಗಳಲ್ಲಿ ಪ್ರದರ್ಶನ ನೀಡಿದೆ. ಈ ಆವೃತ್ತಿಯಲ್ಲಿ ಮೈಸೂರಿನ ಜನರಿಗೆ ಭರಪೂರ ಎಂಟರ್ ಟೈನ್ಮೆಂಟ್ ಸಿಗುವ ಜೊತೆಗೆ ಸಂಗೀತದ ಇನ್ನೊಂದು ಹೊಸ ಅನುಭವ ಸಿಗಲಿದೆ.
ನಿಮ್ಮ ಟಿಕೆಟ್ ಬುಕ್ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ:
https://www.district.in/events/casa-bacardi-on-tour-i-mysuru-nov22-2025-buy-tickets?disableSSR=true
key words: biggest party, Mysore, CASA BACARDÍ on tour






