ಸೌದಿ ಅರೇಬಿಯಾ ಭೀಕರ ಅಪಘಾತ: 42 ಭಾರತೀಯರು ಸಾವು

ಸೌದಿ ಅರೇಬಿಯಾ, ನವೆಂಬರ್, 17,2025 (www.justkannada.in):  ಸೌದಿ ಅರೇಬಿಯಾದಲ್ಲಿ ಡೀಸೆಲ್ ಟ್ಯಾಂಕರ್​ ಗೆ ಬಸ್ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ  ಅಪಘಾತದಲ್ಲಿ 42 ಮಂದಿ ಭಾರತೀಯರು  ಸಾವನ್ನಪ್ಪಿರುವ ಘಟನೆ ನಡೆದಿದೆ.

ಸೌದಿ ಅರೇಬಿಯಾದ ಮುಫರಿಹತ್ ಬಳಿ ಈ ದುರ್ಘಟನೆ ಸಂಭವಿಸಿದ್ದು, ಮೃತರೆಲ್ಲರೂ ಭಾರತದ ತೆಲಂಗಾಣ ಮೂಲದವರು ಎನ್ನುವ ಮಾಹಿತಿ ಲಭ್ಯವಾಗಿದೆ. ಈ 42 ಮಂದಿ ಮೆಕ್ಕಾದಿಂದ ಮದೀನಕ್ಕೆ ಹೋಗುತ್ತಿದ್ದರು, ಬಸ್ ಮೆಕ್ಕಾದಿಂದ ಮದೀನಾಗೆ ತೆರಳುತ್ತಿದ್ದಾಗ ಮುಫರಿಹತ್ ಬಳಿ  ಅಪಘಾತ ಸಂಭವಿಸಿದೆ.

ಟ್ಯಾಂಕರ್​ ಗೆ ಬಸ್ ಡಿಕ್ಕಿಯಾಗಿದ್ದು ಡಿಕ್ಕಿಯ ನಂತರ ಬಸ್ ಬೆಂಕಿಗೆ ಆಹುತಿಯಾಗಿದ್ದು ಭಾರತದ ತೆಲಂಗಾಣ ಮೂಲದ 42 ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ

ಮೃತರ ಸಂಖ್ಯೆಗಳ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ರಿಯಾದ್‌ ನಲ ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿದೆ ಎಂದು ತೆಲಂಗಾಣ ಸರ್ಕಾರ ತಿಳಿಸಿದೆ.

Key words: 42 Indians, death, Saudi Arabia, Accident