ಮಂಗಳೂರು,ನವೆಂಬರ್,15,2025 (www.justkannada.in): ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮಹಾಘಟಬಂದನ್ ಗೆ ಸೋಲಾದ ಹಿನ್ನೆಲೆಯಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಸಚಿವ ದಿನೇಶ್ ಗುಂಡೂರಾವ್, ಬಿಜೆಪಿ ಹಿಂದುತ್ವದ ಹೆಸರಲ್ಲಿ ಚುನಾವಣೆ ಮಾಡುತ್ತೆ ಎಂದಿದ್ದಾರೆ.
ಇಂದು ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಉತ್ತರ ಭಾರತದಲ್ಲಿ ಬಿಜೆಪಿ ಹಿಂದುತ್ವದ ಹೆಸರಲ್ಲಿ ಚುನಾವಣೆ ಮಾಡುತ್ತೆ. ದಕ್ಷಿಣ ಭಾರತದಲ್ಲಿ ಬಿಜೆಪಿಗರ ಈವಿಭಝನೆ ನೀತಿ ನಡೆಯಲ್ಲ ಕರ್ನಾಟದಲ್ಲೂ ಈ ವಿಚಾರ ಇಟ್ಟುಕೊಂಡು ಚುನಾವಣೆ ಗೆಲ್ಲಲು ಆಗಲ್ಲ. ಬಿಜೆಪಿ ಇಲ್ಲಿ ಯಾವುತ್ತೂ ಗೆದ್ದಿಲ್ಲ ಆದರೆ ಒಳ್ಳೇ ಫಲಿತಾಂಶ ಬಂದಿದೆ. ಉತ್ತರ ಭಾರತದಲ್ಲಿ ಬೇರೆ ಬೇರೆ ವಿಷಯಗಳ ಮೂಲಕ ಜನರ ದಾರಿ ತಪ್ಪಿಸಿದ್ದಾರೆ. ಹೀಗಾಗಿ ಯಶಸ್ಸು ಸಿಕ್ಕಿರಬಹುದು ಎಂದರು.
ಚುನಾವಣೆ ಸಮೀಪದಲ್ಲಿ ಮಹಿಳೆಯರ ಖಾತೆಗೆ 10 ಸಾವಿರ ರೂ. ಹಾಕಿದ್ದಾರೆ. ಚುನಾವಣಾ ಆಯೋಗ ಕ್ರಮ ಕೈಗೊಳ್ಳದಿದ್ದರೇ ಮುಂದೆ ಎಲ್ಲಾ ಸರ್ಕಾರಗಳು ಇದನ್ನು ಅನುಸರಿಸುತ್ತವೆ ಚುನಾವಣೆ ಹತ್ತಿರವಿರುವಾಗ ಹಣ ಪಡೆದು ವೋಟ್ ಹಾಕಿ ಅಂತಾರೆ ಚುನಾವಣಾ ಆಯೋಗ ಇದರ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಆರ್ ಜೆಡಿ ಆಶ್ವಾಸನೆ ನೀಡಿತ್ತು ಆದರೆ ಎನ್ ಡಿಎ ಆಮಿಷ ನೀಡಿದೆ. ಸರ್ಕಾರದ ಹಣವನ್ನ ಚುನಾವಣೆಗೆ ಬಳಸಿ ಆಮಿಷ ನೀಡಿದ್ದಾರೆ ಎಂದು ದಿನೇಶ್ ಗುಂಡೂರಾವ್ ಆರೋಪಿಸಿದರು.
Key words: Bihar Election, BJP, Hindutva, Minister, Dinesh Gundu Rao







