ಅತ್ಯಂತ ಕಿರಿಯ ವಯಸ್ಸಿನ MLA:  ಮೈಥಿಲಿ ಠಾಕೂರ್..

ಪಾಟ್ನಾ,ನವೆಂಬರ್,15,2025 (www.justkannada.in): ಈಕೆ ಯಾರೆಂದು ಹೇಳಬಲ್ಲಿರಾ ? ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮುಸಲ್ಮಾನರೇ ಅಧಿಕವಿರುವ ಅಲಿ ನಗರ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾದ ಈಕೆಯ ಹೆಸರು ಮೈಥಿಲಿ ಠಾಕೂರ್ !

ಅತ್ಯಂತ ಕಿರಿಯ ವಯಸ್ಸಿನ ಶಾಸಕಿಯಾಗಿ ಆಯ್ಕೆಯಾಗಿರುವ ಮೈಥಿಲಿ ಠಾಕೂರ್ ಗೆ ಈಗಷ್ಟೇ 25 ವರ್ಷ !

ಈಕೆಯ ಜನ್ಮ ದಿನಾಂಕ : ಜುಲೈ 25, 2000. ಭಾರತೀಯ ಶಾಸ್ತ್ರೀಯ ಸಂಗೀತವನ್ನು ಅಭ್ಯಸಿಸಿರುವುದು ಮಾತ್ರವಲ್ಲ, ಸಾಂಪ್ರದಾಯಿಕ ಜಾನಪದ ಸಂಗೀತವನ್ನೂ ಕಲಿತಿರುವ ಈಕೆ ಹಿಂದಿ, ಮೈಥಿಲಿ, ಭೋಜ್ ಪುರಿ, ಅವಧಿ, ಮಗಾಹಿ ಸೇರಿದಂತೆ ಹಲವು ಭಾಷೆಗಳಲ್ಲಿ ಭಕ್ತಿ ಗೀತೆಗಳು ಹಾಗೂ ಭಜನ್ ಗಳನ್ನು ಹಾಡಿ ಅಪಾರ ಅಭಿಮಾನಿಗಳನ್ನು ಮತ್ತು  ಜನಪ್ರಿಯತೆಯನ್ನು ಗಳಿಸಿದ್ದಾಳೆ.

ಭೋಜ್ ಪುರಿ ಹಾಗೂ ಮೇಥಿಲಿ ಭಾಷೆಯ ಚಲನಚಿತ್ರಗಳಿಗೆ ಹಿನ್ನೆಲೆ ಗಾಯಕಿಯಾಗಿ ಧ್ವನಿ ನೀಡಿರುವ ಮೈಥಿಲಿ, ಗಿಟಾರ್, ಹಾರ್ಮೋನಿಯಂ, ಪಿಯಾನೋ ಹಾಗೂ ತಬಲಾ ವಾದಕಿಯೂ ಆಗಿದ್ದಾಳೆ.

ಕಳೆದ 11 ವರ್ಷಗಳಿಂದ ಅಂದರೆ ಆಕೆಗೆ ಕೇವಲ 14 ವರ್ಷಗಳಿರುವಾಗ ಆಗಷ್ಟೇ ಪರಿಚಿತವಾಗಿದ್ದ ಯೂ ಟ್ಯೂಬ್   ನಲ್ಲಿ ಸಂಗೀತದ ತನ್ನ ವಿಭಿನ್ನ ವಾಹಿನಿಯನ್ನು ಪ್ರಾರಂಭಿಸಿದ ಸಾಹಸಿ. ಇದೀಗ ಈಕೆಯ ಯೂ ಟ್ಯೂಬ್ ವಾಹಿನಿಯು ಐವತ್ತನಾಲ್ಕು ಲಕ್ಷಕ್ಕೂ ಹೆಚ್ಚು ವೀಕ್ಷಕ ಪ್ರಭುಗಳನ್ನು ಚಂದಾದಾರರನ್ನಾಗಿ ಹೊಂದಿದೆ. ಈಕೆಯ ಭರ್ಜರಿ ಗೆಲುವಿಗೆ ಈಕೆಯ ಯೂ ಟ್ಯೂಬ್ ಕೂಡಾ ತನ್ನದೇ ಆದ ರೀತಿಯಲ್ಲಿ ಕೊಡುಗೆ ನೀಡಿ ಸಹಾಯ ಮಾಡಿದೆ.

ಮೈಥಿಲಿ ದರ್ಭಂಗಾದ ಅಲಿನಗರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಇದೀಗ ಅವರು 12 ಸಾವಿರ ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.

Key words: Bihar, Youngest MLA,  Maithili Thakur