ಅಯ್ಯಪ್ಪನ ಭಕ್ತರಿಗೆ ಉಚಿತ ಅಂಬುಲೆನ್ಸ್: ಚಾಲನೆ ನೀಡಿದ ಸಂಸದ ಯುದುವೀರ್

ಮೈಸೂರು,ನವೆಂಬರ್,15,2025 (www.justkannada.in): ಕರ್ನಾಟಕದಿಂದ ಕೇರಳ ರಾಜ್ಯಕ್ಕೆ ತೆರಳುವ ಶಬರಿಮಲೆ ಅಯ್ಯಪ್ಪ ಸ್ವಾಮಿ ಭಕ್ತರಿಗಾಗಿ, ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಚಿಕ್ಕಕೊಪ್ಪಲು ಗ್ರಾಮದ ಡಿ ಪುನೀತ್ ಅಭಿಮಾನಿ ಬಳಗದ ವತಿಯಿಂದ, ಶಬರಿಮಲೆಯಲ್ಲಿ ಕಾಣೆಯಾದವರು, ಅನಾರೋಗ್ಯಕ್ಕೆ ತುತ್ತಾದವರು ಹಾಗೂ ವಾಹನ ತೊಂದರೆಗೀಡಾದವರ ಸಹಾಯಕ್ಕಾಗಿ ಡಾ. ಪುನೀತ್ ರಾಜ್ ಕುಮಾರ್ ಸಂಸ್ಮರಣಾ ಸೇವಾ ರಥಕ್ಕೆ ಚಾಲನೆ ನೀಡಲಾಯಿತು.

ಆಂಬುಲೆನ್ಸ್ ಗೆ, ಮೈಸೂರಿನ ಅರಮನೆ ಮುಂಭಾಗದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂದೆ ವಿಶೇಷ ಪೂಜೆ ಸಲ್ಲಿಸಲಾಯಿತು, ಕನ್ನಡದ ಬಾವುಟ ತೋರಿಸುವ ಮೂಲಕ ವಿಶೇಷ ಆಂಬುಲೆನ್ಸ್ ಗೆ ಚಾಲನೆ ನೀಡಿದ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಶುಭ ಕೋರಿದರು.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಯದುವೀರ್,  ಪ್ರತಿ ವರ್ಷ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕೇರಳದ ಅಯ್ಯಪ್ಪನ ಸನ್ನಿಧಿಗೆ ಕರ್ನಾಟಕ ರಾಜ್ಯ ಸೇರಿ ದೇಶಾದ್ಯಂತ ಕೋಟ್ಯಂತರ ಭಕ್ತರು ಬರುತ್ತಾರೆ. ಅಂತಹ ಸಂದರ್ಭದಲ್ಲಿ ವ್ಯತಿರಿಕ್ತ ವಾತಾವರಣದಿಂದಾಗಿ ಕೆಲವರಿಗೆ ಅನಾರೋಗ್ಯದ ಸಮಸ್ಯೆ ಕಾಡುತ್ತದೆ.  ಕೆಲವು ಮಕ್ಕಳು ಹಾಗೂ ವಯಸ್ಸಾದವರೂ ಕೂಡ ಕಾಣೆಯಾಗುತ್ತಾರೆ. ವಾಹನಗಳು ಕೂಡ ಕೆಟ್ಟು ನಿಲ್ಲುತ್ತವೆ , ಇಂತಹ ಸಂದರ್ಭದಲ್ಲಿ ಅವರ ಅನುಕೂಲಕ್ಕಾಗಿ ಉಚಿತವಾಗಿ ಸೇವೆ ನೀಡಲು ಮುಂದಾಗಿರುವ ಕೆಆರ್ ನಗರ ತಾಲೂಕಿನ ಚಿಕ್ಕ ಕೊಪ್ಪಲು ಗ್ರಾಮದ ಡಿ ಪುನೀತ್ ಮತ್ತು ಅಭಿಮಾನಿ ಬಳಗದ ವತಿಯಿಂದ ಈ ರೀತಿಯ ಒಳ್ಳೆಯ ಕೆಲಸ ಮಾಡಿರುವುದು ನಿಜಕ್ಕೂ ಶ್ಲಾಘನೀಯ. ಎರಡು ಟೋಲ್ ಫ್ರೀ ನಂಬರ್ ನೀಡಿದ್ದು ಅದರ ಮೂಲಕ  ಸಮಸ್ಯೆ ಇದ್ದವರು ಈ ವಾಹನವನ್ನು ಸಂಪರ್ಕಿಸಿ  ಎಂದರು,.

ಈ ವೇಳೆ  ಕೆಆರ್ ಕ್ಷೇತ್ರದ ಶಾಸಕ ಶಿವತ್ಸ, ಮಾಜಿ ಶಾಸಕ ನಾಗೇಂದ್ರ, ಚಾಮರಾಜ ಕ್ಷೇತ್ರದ ಬಿಜೆಪಿ ಅಧ್ಯಕ್ಷ ದಿನೇಶ್ ಗೌಡ,  ಕಿರಣ್ ಗೌಡ, ಬಿ ಎಂ ರಘು, ಡಿ ಪುನೀತ್ ಅಭಿಮಾನಿ ಬಳಗದ ಸದಸ್ಯರಾದ ಪುಟ್ಟುಬುದ್ಧಿ, ರವಿ ಬೆಳ್ಳಯ್ಯ , ಗಜೇಂದ್ರ , ರಾಮು, ಮಂಜುನಾಥ್,  ಅನಿಲ್ , ಅರ್ಜುನ್, ಕಿರಣ್ , ಪವನ್ , ಶರತ್ , ರಾಮಣ್ಣ, ಸೋಮು, ಮಂಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಹಾಯವಾಣಿ ಸಂಖ್ಯೆ: 8277536622, 9845230909

Key words: Free, ambulance, Ayyappa, devotees, MP Yuduveer