ನಟಿಗೆ ಲೈಂಗಿಕ ಕಿರುಕುಳ ಆರೋಪ; ಉದ್ಯಮಿ ಹಾಗೂ ನಿರ್ಮಾಪಕನ ಬಂಧನ

ಬೆಂಗಳೂರು,ನವೆಂಬರ್,15,2025 (www.justkannada.in): ನಟಿಗೆ ಲೈಂಗಿಕ ಕಿರುಕುಳ  ನೀಡಿದ ಆರೋಪದ ಮೇಲೆ ಉದ್ಯಮಿ ಹಾಗೂ ನಿರ್ಮಾಪಕ ಅರವಿಂದ ರೆಡ್ಡಿಯನ್ನ ಪೊಲೀಸರು ಬಂಧಿಸಿದ್ದಾರೆ.

ಎವಿಆರ್ ಗ್ರೂಪ್ ಸಂಸ್ಥಾಪಕ ಆಗಿರುವ  ಅರವಿಂದ ರೆಡ್ಡಿಯನ್ನ ಕೆಂಪೇಗೌಡ್  ಏರ್ ಪೋರ್ಟ್ ನಲ್ಲಿ ಬಂಧಿಸಲಾಗಿದೆ. ನಟಿಯೊಬ್ಬರಿಗೆ ಲೈಂಗಿಕ ಕಿರುಕುಳ ಸಂಬಂಧ ದೂರು ದಾಖಲಾಗಿತ್ತು ಆರ್ ಆರ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 5 ದಿನಗಳ ಹಿಂದೆ ಕೇಸ್ ಗೋವಿಂದರಾಜನಗರ ಠಾಣೆಗೆ ವರ್ಗಾವಣೆಯಾಗಿತ್ತು.

ಎಸಿಪಿ ಚಂದನ್ ಮತ್ತು ಸುಬ್ರಹ್ಮಣಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು ಶ್ರೀಲಂಕಾದಿಂದ ಬೆಂಗಳೂರಿಗೆ ಬರುವಾಗ ಆರೋಪಿ  ಅರವಿಂದ ರೆಡ್ಡಿ ಲಾಕ್ ಆಗಿದ್ದು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.   ಆರೋಪಿ ಬಂಧನಕ್ಕೆ ಲುಕ್ ಔಟ್ ನೋಟಿಸ್ ಪೊಲೀಸರು ಜಾರಿ ಮಾಡಿದ್ದರು.  ಅರವಿಂದ ರೆಡ್ಡಿ ಮಹಾರಾಜ ಟ್ರೋಫ್ರಿಯ ಬಳ್ಳಾರಿ ಟಸ್ಕರ್ಸ್  ತಂಡದ ನಾಯಕ ಹಾಗೂ ಚಲನಚಿತ್ರ ನಿರ್ಮಾಪಕ ಆಗಿದ್ದಾರೆ.

Key words: Actress, accused, sexual harassment, Businessman, producer, arrested