ಬೆಂಗಳೂರು,ನವೆಂಬರ್,15,2025 (www.justkannada.in): ಸಾಲುಮರದ ತಿಮ್ಮಕ್ಕ ಅವರು ಇಡೀ ಜಗತ್ತಿಗೆ ಪರಿಸರ ಕ್ಷೇತ್ರಕ್ಕೆ ಆದರ್ಶ. ತಿಮ್ಮಕ್ಕ ಅವರ ಅಗಲಿಕೆ ನನಗೆ ಬಹಳ ದುಃಖ, ನೋವು ತರಿಸಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಬೆಂಗಳೂರಲ್ಲಿ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು, ಪದ್ಮಶ್ರೀ ಪುರಸ್ಕೃತೆ ಹಾಗೂ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರ ಅಂತ್ಯಕ್ರಿಯೆ ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಮಧ್ಯಾಹ್ನ 12 ಗಂಟೆಗೆ ನೆರವೇರಲಿದೆ. ಸಾಲುಮರದ ತಿಮ್ಮಕ್ಕ ಇಡೀ ನಾಡಿಗೆ ಆದರ್ಶ ಆಗಿದ್ದರು. ಕೇವಲ ಪರಿಸರ ಸಂರಕ್ಷಣೆ ಮಾತಿನಲ್ಲಿ ಅಲ್ಲ ಅವರು ಕೆಲಸ ಮಾಡಿ ತೋರಿಸಿದವರು ಎಂದು ಬಣ್ಣಿಸಿದರು.
ಪರಿಸರ ನಾಶ ಆದರೆ ಜಗತ್ತೇ ನಾಶ ಆಗುತ್ತೆ ಅಂತ ಸಸಿ ನೆಟ್ಟಿದ್ದಾರೆ. ಸಾಲುಮರದ ತಿಮ್ಮಕ್ಕ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಗೃಹ ಸಚಿವ ಜಿ ಪರಮೇಶ್ವರ್ ಅವರು ಸಂತಾಪ ಸೂಚಿಸಿದರು.
Key words: Saalumarada Thimmakka, ideal, environment, Home Minister, Parameshwar







