ಮೈಸೂರು, ನ.೧೫,೨೦೨೫: ಸಾರ್ವಜನಿಕರ ಅಹವಾಲು ಆಲಿಸಲು ಮುಖ್ಯಮಂತ್ರಿಗಳು ನಡೆಸುವ ಜನತಾ ದರ್ಶನ, ಗ್ರಾಮ ವಾಸ್ತವ್ಯ ಮಾದರಿಯಲ್ಲೇ ಇಲ್ಲೊಬ್ಬರು ಕ್ಷೇತ್ರ ಶಿಕ್ಷಣಾಧಿಕಾರಿ ಸರಕಾರಿ ಶಾಲೆಯಲ್ಲಿ ವಾಸ್ತವ್ಯ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಈ ವಾಸ್ತವ್ಯ, ವಿದ್ಯಾರ್ಥಿಗಳಲ್ಲಿ ಅದರಲ್ಲೂ ಎಸ್.ಎಸ್.ಎಲ್.ಸಿ ವ್ಯಾಸಂಗ ಮಾಡುತ್ತಿರುವವರಲ್ಲಿ ವ್ಯಾಸಂಗದ ಬಗ್ಗೆ ಉತ್ತೇಜಿಸಲು. ಜಿಲ್ಲೆಯ ಎಚ್.ಡಿ.ಕೋಟೆ ತಾಲೊಕಿನ ಕಾಡಂಚಿನ ಗ್ರಾಮ ಡಿ.ಬಿ.ಕುಪ್ಪೆಯಲ್ಲಿ ಶುಕ್ರವಾರ ರಾತ್ರಿ ವಾಸ್ತವ್ಯ, ಮರುದಿನ ಮುಂಜಾನೆಯೇ ಎದ್ದು ಗ್ರಾಮದ ವಿದ್ಯಾರ್ಥಿಗಳ ಮನೆಮನೆಗೆ ತೆರಳಿ ಅವರ ವ್ಯಾಸಂಗದ ಬಗ್ಗೆ ಪರಿಶೀಲನೆ, ಪೋಷಕರ ಜತೆ ಸಮಾಲೋಚನೆ.
ಈ ವಿನೂತನ ಕಾರ್ಯಕ್ಕೆ ಮುಂದಾಗಿರುವುದು ಕ್ಷೇತ್ರ ಶಿಕ್ಷಣಾಧಿಕಾರಿ C.N. ರಾಜು. ಅವರ ಶಾಲಾ ವಾಸ್ತವ್ಯದ ವಿವರ ಹೀಗಿದೆ..

ಶುಕ್ರವಾರ ಸಂಜೆ 6 ರಿಂದ ರಾತ್ರಿ 10 ರ ತನಕ ಮಕ್ಕಳು ಮನೆಯಲ್ಲಿ ಓದುವ ಬಗ್ಗೆ ಹಾಗೂ ಪರೀಕ್ಷೆಯ ಬಗ್ಗೆ ಪೋಷಕರಿಗೆ ವಿದ್ಯಾರ್ಥಿಗಳಿಗೆ ಜಾಗೃತಿ.
ಡಿಬಿ ಕುಕ್ಕೆ ಸರ್ಕಾರಿ ಪ್ರೌಢಶಾಲೆಗೆ 10ನೇ ತರಗತಿಗೆ ಬರುತ್ತಿರುವ ವಿದ್ಯಾರ್ಥಿಗಳ ಗ್ರಾಮಗಳಾದ ಹೊಸೂರು ಗೋಳೂರು, ಬಸವರಾಡಿ ಆನೆಮಾಳ. ಆಣೆ ಮಾಡದ ಹಾಡಿ.ಭಾವಲಿ. ಸೇನಾ ಮಂಗಳ (ಕೇರಳ ). ಗ್ರಾಮದ ಮಕ್ಕಳ ಮನೆಗಳಿಗೆ ಭೇಟಿ.

ಮನೆ ಭೇಟಿ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ನಾರಾಯಣಸ್ವಾಮಿ. ಶಿಕ್ಷಕರಾದ ನವೀನ್ ಆರಾಧ್ಯ. ಎಸ್ ಮಣಿಯ ಪ್ರವೀಣ್ ಕುಮಾರ್ ಹಾಗೂ ಎಸ್ಡಿ ಎಮ್ಸಿಎಮ್ಸಿ ಅಧ್ಯಕ್ಷ ರಾಮು ಹಾಜರಿದ್ದರು. ಸುಮಾರು 32 ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ .
ಈ ವೇಳೆ ” ನಾನು ಓದುತ್ತಿದ್ದೇನೆ ” ಕಾರ್ಯಕ್ರಮದಲ್ಲಿ ನೀಡಿರುವ ಕಾರ್ಡ್ ಗಳ ಪರಿಶೀಲನೆ. ಜತೆಗೆ ಮನೆಯಲ್ಲಿ ಓದುವ ವೇಳಾಪಟ್ಟಿಯಂತೆ ಮಕ್ಕಳು ಓದುತ್ತಿರುವ ಬಗ್ಗೆ ಪೋಷಕರಿಂದ ಖಾತ್ರಿ. ಎಸ್ ಎಸ್ ಎಲ್ ಸಿ ಪರೀಕ್ಷೆ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಮನೆಯಲ್ಲಿ ಹೆಚ್ಚು ಕೆಲಸ ಮಾಡಿಸದಂತೆ ಪೋಷಕರಿಗೆ ಮನವರಿಕೆ.
ಹೆಣ್ಣು ಮಕ್ಕಳಿಗೆ ಮನೆಯಲ್ಲಿ ಬೆಳಗಿನ ಜಾವ ಪಾತ್ರೆ ತೊಳೆಯುವುದು, ಕಸ ಗುಡಿಸುವುದು, ರಂಗೋಲಿ ಹಾಕುವುದು ಇತರೆ ಗೃಹೋಪಯೋಗಿ ಕೆಲಸಗಳಿಂದ ದೂರವಿರಿಸುವಂತೆ ಪೋಷಕರಿಗೆ ಜಾಗೃತಿ.
ಎಸ್ ಎಸ್ ಎಲ್ ಸಿ ಪರೀಕ್ಷಾ ದೃಷ್ಟಿಯಿಂದ ಮಕ್ಕಳಿಗೆ ಹೆಚ್ಚು ಕೆಲಸ ಕಾರ್ಯ ಮಾಡಿಸದೆ ಪ್ರತಿದಿನ ಶಾಲೆಗೆ ಹಾಜರಾಗುವಂತೆ ಸಲಹೆ ನೀಡಲಾಯಿತು.
key words: BEO C.N.Raju stay, government school,Karnataka border village, SSLC exam results, motivating, students.

SUMMARY:

“BEO stay” at a government school in Karnataka border village to improve SSLC exam results by motivating students.
To encourage students, especially those studying SSLC, to study. Stayed in D.B.Kuppe, a forest village in H.D.Kote taluk of the district, on Friday night, woke up early the next morning and went to the homes of the students in the village to check on their studies and consult with their parents. This innovative work was initiated by the Block Education Officer C.N.Raju.






