ಮೈಸೂರು,ನವೆಂಬರ್, 14,2025 (www.justkannada.in): ಜಿಆರ್ ಎಸ್ ಫ್ಯಾಂಟಸಿ ಪಾರ್ಕ್ ನ ಆಟವಾಡುವ ವೇಳೆ ಯಂತ್ರದಲ್ಲಿ ಲೋಪ ಕಂಡು ಬಂದು ವ್ಯಕ್ತಿಯೊಬ್ಬರ ಕಾಲು ಯಂತ್ರಗಳ ಮಧ್ಯೆ ಸಿಲುಕಿ ಎರಡು ಬೆರಳುಗಳನ್ನ ಕಳೆದುಕೊಂಡ ಘಟನೆ ನಡೆದಿದ್ದು ಈ ಸಂಬಂಧ ಜಿಆರ್ ಎಸ್ ನ ಎಂ.ಡಿ ಮತ್ತು ಜಿ.ಎಂ.ವಿರುದ್ದ ಪ್ರಕರಣ ದಾಖಲಾಗಿದೆ.
ದೆಹಲಿ ಮಹಾನಗರ ಪಾಲಿಕೆಯ ಅಸಿಸ್ಟೆಂಟ್ ಅಸೆಸರ್ ವಿಶಾಂತ್ ಯಾದವ್ ಅವರೇ ಬೆರಳುಗಳನ್ನ ಕಳೆದುಕೊಂಡವರು. ಶಾಶ್ವತ ಅಂಗವಿಕಲರಾದ ಹಿನ್ನಲೆ ಕಾನೂನು ಕ್ರಮ ಕೈಗೊಳ್ಳುವಂತೆ ವಿಶಾಂತ್ ಯಾದವ್ ರವರು ಜಿಆರ್ ಎಸ್ ಫ್ಯಾಂಟಸಿ ಪಾರ್ಕ್ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಜನರಲ್ ಮ್ಯಾನೇಜರ್ ವಿರುದ್ದ ಮೇಟಗಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ವಿಶಾಂತ್ ಯಾದವ್ ಅಕ್ಟೋಬರ್ ನಲ್ಲಿ ತಮ್ಮ ಸಹೋದರನ ಜೊತೆ ಮೈಸೂರಿಗೆ ಬಂದಿದ್ದರು. ಈ ನಡುವೆ ವಿಶಾಂತ್ ಯಾದವ್ ರವರು GRS ಫ್ಯಾಂಟಸಿ ಪಾರ್ಕ್ ಗೆ ಆಟವಾಡಲು ತೆರಳಿದ್ದು, ಈ ವೇಳೆ ಸೂಪರ್ ಡ್ರಾಪರ್ ವಾಟರ್ ಸ್ಲೈಡರ್ ನಲ್ಲಿ ಆಟವಾಡುವ ವೇಳೆ ಯಂತ್ರದ ಮಧ್ಯೆ ಕಾಲುಗಳು ಸಿಲುಕಿ ತೀವ್ರ ಗಾಯಗೊಂಡಿದ್ದರು.
ತಕ್ಷಣ ವಿಶಾಂತ್ ಯಾದವ್ ರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನೆಯಲ್ಲಿ ವಿಶಾಂತ್ ಯಾದವ್ ಎರಡು ಬೆರಳುಗಳನ್ನ ಶಾಶ್ವತವಾಗಿ ಕಳೆದುಕೊಂಡಿದ್ದಾರೆ.
ಸುರಕ್ಷಾ ಕ್ರಮ ಅನುಸರಿಸದೆ ದೋಷಪೂರಿತ ಯಂತ್ರದಿಂದಾಗಿ ತಾವು ಶಾಶ್ವತ ಅಂಗವಿಕಲನಾಗಿದ್ದೇನೆಂದು ಆರೋಪಿಸಿ ಜಿಆರ್ ಎಸ್ ನ ಎಂಡಿ ಹಾಗೂ ಜಿಎಂ ವಿರುದ್ದ ದೂರು ನೀಡಿದ್ದು ಎಫ್ ಐಆರ್ ದಾಖಲಾಗಿದೆ.
Key words: Finger cut, machine, GRS Fantasy Park:, FIR, Mysore







