ಬಿಹಾರ ಚುನಾವಣಾ ಫಲಿತಾಂಶ: ಜನ ಕೊಟ್ಟ ತೀರ್ಪು ಒಪ್ಪಿಕೊಳ್ಳುತ್ತೇವೆ- ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಜನವರಿ,14,2025 (www.justkannada.in):  ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಎನ್ ಡಿಎ ಮೈತ್ರಿಕೂಟ ಭರ್ಜರಿ ಜಯ ಸಾಧಿಸಿದರೇ ಕಾಂಗ್ರೆಸ್, ಆರ್ ಜೆಡಿ ನೇತೃತ್ವದ ಮಹಾಘಟಬಂದನ್ ನೆಲ ಕಚ್ಚಿದ್ದು, ಮುಖಭಂಗ ಅನುಭವಿಸಿದೆ.

ಬಿಹಾರ ಚುನಾವಣೆ ಫಲಿತಾಂಶದ  ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ವೋಟ್ ಚೋರಿ ಮಾಡಿದ್ದಾರಲ್ಲ ಎಂದಿದ್ದಾರೆ.

ಎನ್ ಡಿಎಗೆ ಯಾಕೆ ಇಷ್ಟು ಫಲಿತಾಂಶ ಬಂತು ನಮಗೆ ಯಾಕೆ ಹಿನ್ನಡೆ ಆಯಿತು ಎಂಬ ಬಗ್ಗೆ ಚರ್ಚಿಸುತ್ತೇವೆ. ಜನ ಕೊಟ್ಟ ತೀರ್ಪನ್ನ ಒಪ್ಪಿಕೊಳ್ಳತ್ತೇವೆ ಎಂದು  ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

Key words: Bihar election, results, accept, CM Siddaramaiah