ಬಿಹಾರದಲ್ಲಿ ನೆಲ ಕಚ್ಚಿದ ಕಾಂಗ್ರೆಸ್: NDA ಕೂಟಕ್ಕೆ ಅಭೂತಪೂರ್ವ ಗೆಲುವು

ಪಾಟ್ನಾ,ನವೆಂಬರ್,14,2025 (www.justkannada.in):  ಬಹುನಿರೀಕ್ಷಿತ ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳುತ್ತಿದ್ದು ಕಾಂಗ್ರೆಸ್ ನೇತೃತ್ವದ ಮಹಾಘಟಬಂದನ್ ಗೆ ತೀವ್ರ ಮುಖಭಂಗವಾದರೆ ಬಿಜೆಪಿ, ಜೆಡಿಯು ನೇತೃತ್ವದ ಎನ್ ಡಿಎ ಅಭೂತ ಪೂರ್ವ ಗೆಲುವು ಸಾಧಿಸಿದೆ.

ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು 96 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೇ ಇತ್ತ ಕಾಂಗ್ರೆಸ್ ಕೇವಲ ಎರಡು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ನೆಲಕಚ್ಚಿದೆ.

ಪ್ರಸ್ತುತ 243 ಸ್ಥಾನಗಳ ಪೈಕಿ ಎನ್ ಡಿಎ 205 ಮಹಾಘಟಬಂದನ್ 30 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.  ಬಿಜೆಪಿ, 96, ಜೆಡಿಯು 81, ಎಲ್ ಜೆಪಿ 20, ಹೆಚ್ ಎಎಂ 5, ಆರ್ ಎಲ್ ಎಂ 4ರಲ್ಲಿ ಮುನ್ನಡೆ ಸಾಧಿಸಿದರೇ ಆರ್ ಜೆಡಿ 26, ಕಾಂಗ್ರೆಸ್ 2 ಲೆಫ್ಟ್ 2 ಸ್ಥಾನಗಳಲ್ಲಿ ಮುನ್ನಡೆಯಿದೆ.

Key words: Bihar Election Result,  victory, NDA alliance