Bihar election Result: ತೇಜಸ್ವಿ ಯಾದವ್, ತೇಜ್ ಪ್ರತಾಪ್ ಯಾದವ್ ಗೆ ಹಿನ್ನೆಡೆ

ಪಾಟ್ನಾ ,ನವೆಂಬರ್,14,2025 (www.justkannada.in):  ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದು ಆರ್ ಜೆಡಿ ಅಭ್ಯರ್ಥಿ ತೇಜಸ್ವಿಯಾದವ್ ಹಿನ್ನೆಡೆ ಅನುಭವಿಸಿದ್ದಾರೆ.

ರಾಘೋಪುರ ಕ್ಷೇತ್ರದಲ್ಲಿ ನಾಲ್ಕನೇ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಸತೀಶ್ ಕುಮಾರ್ 3016 ಮತಗಳ ಮುನ್ನೆಡೆ ಸಾಧಿಸಿದರೇ ಆರ್ ಜೆಡಿ ಅಭ್ಯರ್ಥಿ ತೇಜಸ್ವಿಯಾದವ್ ಹಿನ್ನೆಡೆ ಸಾಧಿಸಿದ್ದಾರೆ.  ಈವರೆಗಿನ ಲೆಕ್ಕಾಚಾರದಲ್ಲಿ ಸತೀಶ್ ಕುಮಾರ್ ಗೆ 17599 ಮತಗಳು,  ತೇಜಸ್ವಿಯಾದವ್  ಗೆ 14583 ಮತಗಳು ಲಭಿಸಿವೆ.

ಮಹುವಾದಿಂದ ಎಲ್ ಜೆಪಿ ಅಭ್ಯರ್ಥಿ  ಸಂಜಯ್ ಕುಮಾರ್ ಸಿಂಗ್ ಮುನ್ನಡೆ ಸಾಧಿಸಿದರೆ  ಜನಶಕ್ತಿ ಜನತಾ ದಳದ ಮುಖ್ಯಸ್ಥ ತೇಜ್ ಪ್ರತಾಪ್ ಯಾದವ್ 4ನೇ ಸ್ಥಾನಕ್ಕೆ ಕುಸಿದಿದ್ದಾರೆ.

Key words: Bihar election, result,  Tejaswi Yadav, Tej Pratap Yadav