ನಾಳೆ ಭಾನವಿ ಆಸ್ಪತ್ರೆ ವತಿಯಿಂದ ಮಧುಮೇಹ ಜಾಗೃತಿ ಜಾಥಾ

ಮೈಸೂರು,ನವೆಂಬರ್,13,2025 (www.justkannada.in):  ಮೈಸೂರಿನ  ಕುವೆಂಪುನಗರದಲ್ಲಿರುವ ಭಾನವಿ ಆಸ್ಪತ್ರೆ ವತಿಯಿಂದ ನವೆಂಬರ್ 14(ನಾಳೆ) ರಂದು ಮಧುಮೇಹ ಜಾಗೃತಿ ಜಾಥಾವನ್ನ ಆಯೋಜಿಸಲಾಗಿದೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆಸ್ಪತ್ರೆಯ ಪ್ರಧಾನ ವ್ಯವಸ್ಥಾಪಕ ಆರ್. ಪ್ರಶಾಂತ್, ನವೆಂಬರ್ 14 ರಂದು ಬೆಳಿಗ್ಗೆ 8 ಗಂಟೆಗೆ ‘ಜೀವನದ ಎಲ್ಲ ಹಂತಗಳಲ್ಲಿ ಮಧುಮೇಹ’ ಎಂಬ ಘೋಷಣೆಯೊಂದಿಗೆ ಜನಜಾಗೃತಿ ಜಾಥಾ ನಡೆಸಲಾಗುವುದು. ಆಸ್ಪತ್ರೆಯ ಮುಂಭಾಗದಲ್ಲಿ ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಅವರು ಜಾಗೃತಿ ಜಾಥಾಕ್ಕೆ ಚಾಲನೆ ನೀಡುವರು. ಜಾಥಾವು ಭಾನವಿ ಆಸ್ಪತ್ರೆಯಿಂದ ಹೊರಟು ಅಕ್ಷಯ ಭಂಡಾರ ವೃತ್ತ, ಬ್ಯಾಂಕ್ ಆಫ್ ಬರೋಡಾ ವೃತ್ತ, ಎಟು ಜೆಡ್ ರಸ್ತೆಯಲ್ಲಿ ಸಾಗಿ ಮತ್ತೆ ಭಾನವಿ ಆಸ್ಪತ್ರೆಯನ್ನು ತಲುಪಲಿದೆ ಎಂದು ಮಾಹಿತಿ ನೀಡಿದರು.

ಈ ಜಾಥಾದಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಟಿ-ಶರ್ಟ್, ಉಪಾಹಾರ ವ್ಯವಸ್ಥೆ ಇರುತ್ತದೆ. ಇದಲ್ಲದೆ ಅಂದು ಆಸ್ಪತ್ರೆ ವತಿಯಿಂದ ಸಾರ್ವಜನಿಕರಿಗೆ ಉಚಿತ ವಾಗಿ ಸಕ್ಕರೆ ಕಾಯಿಲೆ, ರಕ್ತದೊತ್ತಡ ಮೊದಲಾದ ವೈದ್ಯಕೀಯ ಪರೀಕ್ಷೆ ಗಳನ್ನು ನಡೆಸಲಾಗುವುದು ಎಂದು  ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆಯ ಮುಖ್ಯಸ್ಥ ಡಾ.ಎನ್. ವಿಜಯಚೆಲುವರಾಜ್, ಡಾ. ಚಂದನ್ ಕುಮಾರ್, ನಿರಂಜನಸ್ವಾಮಿ ಉಪಸ್ಥಿತರಿದ್ದರು.

Key words: Diabetes, awareness, rally, Mysore, Bhanavi Hospital ,tomorrow