ತುಮಕೂರು ,ನವೆಂಬರ್,13,2025 (www.justkannada.in): 2004ರಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿ ಕಾಂಗ್ರೆಸ್ ವೈಟ್ ವಾಶ್ ಮಾಡಿದ್ದವು:. ಈಗ ಮತ್ತೆ ಅದೇ ಸಂದರ್ಭ ಬರುತ್ತೋ ಗೊತ್ತಿಲ್ಲ ಎಂದು ಮಾಜಿ ಸಚಿವ ಕೆ.ಎನ್ ರಾಜಣ್ಣ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಮಧುಗಿರಿ ತಾಲೂಕಿನ ದೊಡ್ಡೆರಿಯಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದ ಕೆ.ಎನ್ ರಾಜಣ್ಣ, ನಾನು ಮಧುಗಿರಿ ಕ್ಷೇತ್ರಕ್ಕೆ ಬಂದಾಗ ಕಾರ್ಯಕರ್ತರು ಕಾಂಗ್ರೆಸ್ ಬಾವುಟ ಹಿಡಿದು ರ‍್ಯಾಲಿ ಮಾಡುತಿದ್ದರು. ಇವತ್ತಿನ ರ‍್ಯಾಲಿಯಲ್ಲಿ ಯಾರೂ ಕಾಂಗ್ರೆಸ್ ಬಾವುಟ ಹಿಡಿಯಲೇ ಇಲ್ಲ. ಅವರಿಗೂ ಕಾಂಗ್ರೆಸ್ ಪಕ್ಷದ ಮೇಲೆ ಬೇಸರ ತರಿಸಿದಂತಿದೆ. ಮುಂದಿನ ದಿನದಲ್ಲಿ ಯಾವ ಬಾವುಟ ಹಿಡಿಬೇಕು ಎನ್ನುವುದನ್ನು ತೀರ್ಮಾನ ಮಾಡುತ್ತೇನೆ ಎಂದರು.
2004 ರಲ್ಲಿ ಕಾಂಗ್ರೆಸ್ ಪಕ್ಷ ನನ್ನನ್ನು ಗೌರವದಿಂದ ನೋಡಿಕೊಂಡಿರಲಿಲ್ಲ. ಆಗ ನಾನು ಜೆಡಿಎಸ್‌ನಿಂದ ಸ್ಪರ್ಧಿಸಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ವೈಟ್ ವಾಶ್ ಮಾಡಿದ್ದೆವು. ಈಗ ಮತ್ತೆ ಅದೇ ಸಂದರ್ಭ ಬರುತ್ತೋ ಗೊತ್ತಿಲ್ಲ. ರಾಜಕಾರಣದಲ್ಲಿ ಯಾರು ಶತ್ರು ಅಲ್ಲ ಮಿತ್ರರೂ ಅಲ್ಲ ಎಂದಿದ್ದಾರೆ.
Key words: Congress, whitewashed ,2004, K.N. Rajanna







