ಕಾರು ಬ್ಲಾಸ್ಟ್ ಕೇಸ್: ಕೇಂದ್ರ ಮತ್ತು ದೆಹಲಿ ಸರ್ಕಾರವೇ ಹೊಣೆ- ಬಿ.ಕೆ ಹರಿಪ್ರಸಾದ್

ಬೆಂಗಳೂರು,ನವೆಂಬರ್, 11,2025 (www.justkannada.in):  ದೆಹಲಿಯ ಕೆಂಪುಕೋಟೆಯಲ್ಲಿ ಕಾರು ಬ್ಲಾಸ್ಟ್ ಆದ ಘಟನೆಗೆ ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರವೇ ಹೊಣೆ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಕಿಡಿಕಾರಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿ.ಕೆ ಹರಿಪ್ರಸಾದ್, ಕೇಂದ್ರ ಹಾಗೂ ದೆಹಲಿಯಲ್ಲಿ ಒಂದೇ ಸರ್ಕರವಿದೆ.  ಇದರಲ್ಲಿ ಯಾರ ವೈಪಲ್ಯ ಅಂತ ಗೊತ್ತಾಗುತ್ತಿಲ್ಲ.  ಗುಪ್ತಚರ ಇಲಾಖೆ ವೈಪಲ್ಯ ಅನ್ನೋದು ನನ್ನ ಭಾವನೆ ಎಂದರು.

ಪಹಲ್ಗಾಮ್ ಘಟನೆ ಬಳಿಕ ಎಚ್ಚರಿಕೆ ವಹಿಸಿದ್ದರೆ ಇಂತಹ ಘಟನೆ ತಪ್ಪಿಸಬಹುದಿತ್ತು. ಕೇಂದ್ರ ಸರ್ಕಾರ ದೆಹಲಿ ಸರ್ಕಾರ ಈ ಘಟನೆಗೆ ಕಾರಣ. ವೈಪಲ್ಯಕ್ಕೆ ಕಾರಣರಾದವರು ಈ ಹೊಣೆ ಹೊರಬೇಕು  ಎಂದು ಬಿಕೆ ಹರಿಪ್ರಸಾದ್ ತಿಳಿಸಿದರು.

Key words: Car blast case,  Center, Delhi government, responsible, BK Hariprasad