ಹುಲಿಗಳು, ಆನೆಗಳ ಸಂಖ್ಯೆ ಹೆಚ್ಚಳ: ಕಾಡಿನಿಂದ ಹೊರಬರದಂತೆ ತಡೆಗೆ ಕ್ರಮ- ಸಿಎಂ ಸಿದ್ದರಾಮಯ್ಯ

ಮೈಸೂರು,ನವೆಂಬರ್,11,2025 (www.justkannada.in):  ಮೈಸೂರು ಜಿಲ್ಲೆಯಲ್ಲಿ ಹುಲಿ ದಾಳಿ ಪ್ರಕರಣ ಹೆಚ್ಚಳವಾಗಿದೆ. ಮೂರು ಜನ ಹುಲಿ ದಾಳಿಗೆ ಮೃತರಾಗಿದ್ದಾರೆ. ಪ್ರಾಣಿಗಳು ಕಾಡಿನಿಂದ ಹೊರಬರದಂತೆ ಕಾವಲು ಕಾಯುವ ಕೆಲಸ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ,  ಹುಲಿಗಳು, ಆನೆಗಳ ಸಂಖ್ಯೆ ಹೆಚ್ಚಳವಾಗಿದೆ. ನಿನ್ನೆ ನಡೆದ ಸಭೆಯಲ್ಲಿ ಅರಣ್ಯಾಧಿಕಾರಿಗಳು ನೀಡಿದ ಉತ್ತರದಿಂದ ನಾನು ಸಮಾಧಾನವಾಗಿಲ್ಲ. ಕಾಡಿನೊಳಗೆ ನೀರು, ಮೇವು ಸಮೃದ್ಧವಾಗಿ ಸಿಗಬೇಕು. ಲ್ಯಾಂಟೆನ ಹೆಚ್ಚಾಗಿ ಕಾಡಿನಲ್ಲಿ ಬೆಳೆದಿದೆ. ಅದನ್ನ ಕ್ಲೀನ್ ಮಾಡಿ, ಕೆರೆ, ಗುಂಡಿಗಳಲ್ಲಿ‌ ನೀರು ಸಿಗಬೇಕು. ಅದನ್ನ ಕಟ್ಟು ನಿಟ್ಟಾಗಿ ಮಾಡಲೇಬೇಕು ಎಂದು ಸೂಚಿಸಿದ್ದೇನೆ ಎಂದರು.

ಹುಲಿ ದಾಳಿಗೆ ವೈಜ್ಞಾನಿಕ ಕಾರಣ ಹುಡುಕಲು ರಾಜ್ಯಮಟ್ಟದ ಸಭೆ ಮಾಡುತ್ತೇನೆ. ಮುಂದಿನ ವಾರ ಅರಣ್ಯ ಸಚಿವರು, ಅಧಿಕಾರಿಗಳ ಜೊತೆ ಸಭೆ ನಡೆಸುವೆ. ರೈಲ್ವೆ ಬ್ಯಾರಿಕೇಡ್ ಎಲ್ಲಾ ಕಡೆ ಮಾಡಿಲ್ಲ. ಬಿಜೆಪಿ ಸರ್ಕಾರ ಅದನ್ನ ನಿಲ್ಲಿಸಿಬಿಟ್ಟಿದ್ದರು.  ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು ಸೇರಿ ಎಲ್ಲರ ಜೊತೆ ಮೀಟಿಂಗ್ ಮಾಡುವೆ. ಕಾಡಿನಲ್ಲಿ ರೈಲ್ವೆ ಬ್ಯಾರಿಕೇಡ್ ಅಳವಡಿಕೆ ಮಾಡಬೇಕು. ತಂತಿ ಬೇಲಿ ಉಪಯೋಗವಿಲ್ಲ. ಅದನ್ನ ತುಳಿದು ಆನೆಗಳು ದಾರಿ ಮಾಡಿಕೊಳ್ಳುತ್ತವೆ. ಒಂದು ವರ್ಷದಲ್ಲಿ ಎಲ್ಲೆಲ್ಲಿ ಅಗತ್ಯವಿದೆ ಅಲ್ಲೆಲ್ಲಾ ಬ್ಯಾರಿಕೇಡ್ ಅಳವಡಿಸಲಾಗುವುದು. ಪ್ರಾಣಿಗಳು ಕಾಡಿನಿಂದ ಹೊರಬರದಂತೆ ಕಾವಲು ಕಾಯುವ ಕೆಲಸ ಮಾಡಲಾಗುವುದು ಎಂದರು.

Key words: tigers, elephants, Attack, Meeting, CM, Siddaramaiah