ಮೈಸೂರು,ನವೆಂಬರ್,11,2025 (www.justkannada.in): ಡ್ರಗ್ಸ್ ಜಾಲಕ್ಕೆ ಕಡಿವಾಣ ಹಾಕಿ ಮೈಸೂರು ಜಿಲ್ಲೆಯನ್ನ ಡ್ರಗ್ಸ್ ಮುಕ್ತ ಜಿಲ್ಲೆಯನ್ನಾಗಿ ಮಾಡುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಇಂದು ಮೈಸೂರಿನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಿನ್ನೆ ಕೆಡಿಪಿ ಸಭೆಯಲ್ಲಿ ಎಸ್ಪಿ, ಐಜಿ, ಕಮೀಷನರ್, ಡಿಸಿಪಿಗಳು ಭಾಗವಹಿಸಿದ್ದರು. ಅಪರಾಧ ಪ್ರಕರಣಗಳನ್ನ ತಡೆಗಟ್ಟಬೇಕು. ಎಫ್ ಐಆರ್ ರಿಜಿಸ್ಟರ್ ಆದ ಮೇಲೆ 90 ದಿನಗಳಲ್ಲಿ ಚಾರ್ಜ್ ಶೀಟ್ ರೆಡಿ ಮಾಡಬೇಕು. ಶಿಕ್ಷೆಯ ಪ್ರಮಾಣವನ್ನ ಹೆಚ್ಚಳ ಮಾಡಬೇಕು. ಅಪರಾಧ ನಡೆದಾಗ ಕಮೀಷನರ್, ಎಸ್ಪಿ ಸ್ಥಳಕ್ಕೆ ಭೇಟಿ ನೀಡಬೇಕು. ಮೈಸೂರು ಜಿಲ್ಲೆಯಲ್ಲಿ 23 ಪೊಲೀಸ್ ಠಾಣೆಗಳಿವೆ. ಎಲ್ಲಾ ಠಾಣೆಗಳಿಗೂ ಎಸ್ಪಿ ಭೇಟಿ ನೀಡಬೇಕು. ಅಪರಾಧಿ, ರೌಡಿಗಳನ್ನ ಬಿಟ್ಟು ಉಳಿದವರ ಜೊತೆ ಜನಸ್ನೇಹಿಯಾಗಿರಬೇಕು. ಕಳೆದ ವರ್ಷಕ್ಕಿಂತ ಈ ವರ್ಷ ಕಡಿಮೆ ಅಪರಾಧ ಆಗುವಂತೆ ನೋಡಿಕೊಳ್ಳಬೇಕು. ಕೊಲೆ, ಡಕಾಯಿತಿ, ಸರಗಳ್ಳತನ ಸೇರಿ ಅಪರಾಧಗಳು ಕಡಿಮೆ ಆಗಬೇಕು. ಡ್ರಗ್ಸ್ ಜಾಲ ದೊಡ್ಡದಾಗಿರುವ ಕಾರಣಕ್ಕೆ ಕಡಿವಾಣ ಹಾಕಿ. ವಿದ್ಯಾರ್ಥಿಗಳು, ಯುವಕರು ಡ್ರಗ್ಸ್ ಚಟಕ್ಕೆ ಸಿಲುಕಿದ್ದಾರೆ. ಅವರ ಭವಿಷ್ಯದ ದೃಷ್ಠಿಯಿಂದ ಡ್ರಗ್ಸ್ ಮುಕ್ತ ಜಿಲ್ಲೆಯನ್ನಾಗಿ ಮಾಡವಂತೆ ಸೂಚಿಸಿದ್ದೇನೆ ಎಂದರು.
ಪೊಲೀಸರಿಗೆ ತಿಳಿಯದೆ ಅಪರಾಧ ನಡೆಯಲು ಸಾಧ್ಯವಿಲ್ಲ. ರೌಡಿಗಳು, ರಿಯಲ್ ಎಸ್ಟೇಟ್, ಡ್ರಗ್ಸ್ ಹಾವಳಿ ಅವರಿಗೆ ಗೊತ್ತಿಲ್ಲದೆ ಸಾಧ್ಯವಿಲ್ಲ. ಯಾರ್ಯಾರು ಡ್ರಗ್ಸ್ ಪೆಡ್ಲರ್, ಸ್ಮಗ್ಲರ್ ಎಂಬ ಬಗ್ಗೆ ತಿಳಿದಿರುತ್ತದೆ. ಈ ಕಾರಣಕ್ಕೆ ಅವರ ಬಗ್ಗೆ ನಿಗಾ ಇರಿಸಬೇಕು. ಮಂಗಳೂರಿನಲ್ಲಿ ಇತ್ತೀಚೆಗೆ ಕಮೀಷನರ್ , ಎಸ್ಪಿ ಬದಲಾವಣೆ ಮಾಡಿದವು. ಈ ಕಾರಣಕ್ಕೆ ಧರ್ಮ ಸಂಘರ್ಷ ಕಡಿಮೆ ಆಗಿವೆ. ಮಂಗಳೂರಿನಂತಹ ಕೋಮುಗಲಭೆ ನಡೆಯುತ್ತಿದ್ದ ಜಾಗದಲ್ಲಿ ಸಾಧ್ಯವಾಗಿದೆ. ಅಲ್ಲಿ ಸಾಧ್ಯವಾಗುವುದು ಬೇರೆ ಜಿಲ್ಲೆಯಲ್ಲಿ ಯಾಕೆ ಸಾಧ್ಯವಿಲ್ಲ. ಇದನ್ನ ಉದಾಹರಣೆ ನೀಡಿ ಖಡಕ್ ಸೂಚನೆ ನೀಡಿರುವೆ ಎಂದರು.
ಅತ್ಯಾಚಾರದಂತಹ ಘಟನೆ ನಡೆದ್ರೆ ಅದಕ್ಕೆ ಕಮಿಷನರ್ ನೇರ ಹೊಣೆ
ಇತ್ತೀಚೆಗೆ ಮೈಸೂರಲ್ಲಿ ನಡೆದ ಬಾಲಕಿ ರೇಪ್& ಮರ್ಡರ್ ಕೇಸ್, ಇದು ನಿಜಕ್ಕೂ ನಾಗರೀಕ ಸಮಾಜ ತಲೆತಗ್ಗಿಸುವ ವಿಚಾರ. ಇನ್ಮುಂದೆ ಇಂತಹ ಘಟನೆ ನಡೆದರೆ ಕಮೀಷನರ್ ನೇರ ಕಾರಣ ಎಂದು ಸಿಎಂ ಸಿದ್ದರಾಮಯ್ಯ ಖಡಕ್‌ಎಚ್ಚರಿಕೆ ನೀಡಿದರು.
Key words: Instructions, Mysore, drug free, district, CM Siddaramaiah







