ಮೈಸೂರು,ನವೆಂಬರ್,10,2025 (www.justkannada.in): ಬಾಲಕನ ಮೇಲೆ ಸಹಪಾಠಿಗಳಿಂದ ಹಲ್ಲೆ ನಡೆಸಿದ ಪರಣಾಮ ಬಾಲಕ ವೃಷಣ ಕಳೆದುಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ನವೀನ್ (ಹೆಸರು ಬದಲಾಯಿಸಲಾಗಿದೆ) ಎಂಬ ಬಾಲಕನ ಮೇಲೆ ಸಹಪಾಠಿಗಳು ಹಲ್ಲೆ ನಡೆಸಿದ್ದು, ಈ ವೇಳೆ ಆತ ವೃಷಣ ಕಳೆದುಕೊಂಡಿದ್ದಾನೆ ಎನ್ನಲಾಗಿದೆ. ಪ್ರಕರಣ ಸಂಬಂಧ ಆತನ ಮೇಲೆ ಹಲ್ಲೆ ನಡೆಸಿದ ಅಪ್ರಾಪ್ತ ಬಾಲಕರು ಮತ್ತು ಶಾಲೆ ಆಡಳಿತ ಮಂಡಳಿಯ ವಿರುದ್ಧ ಜಯಲಕ್ಷ್ಮೀಪುರಂ ಠಾಣೆಯಲ್ಲಿ ಎಫ್. ಐ.ಆರ್ ದಾಖಲಾಗಿದೆ.
ಪೊಲೀಸರು ಬಾಲಕನ ಹೇಳಿಕೆ ಪಡೆದು ತನಿಖೆ ನಡೆಸುತ್ತಿದ್ದು, ಸದ್ಯ ವೃಷಣ ಶಸ್ತ್ರ ಚಿಕಿತ್ಸೆ ಬಳಿಕ ಮನೆಯಲ್ಲಿ ಹಲ್ಲೆಗೊಳಗಾದ ಬಾಲಕ ಸುಧಾರಿಸಿಕೊಳ್ಳುತ್ತಿದ್ದಾನೆ.
Key words: Boy, loses .testicle, assaulted, classmates. FIR. filed







