ದಾವಣಗೆರೆ,ನವೆಂಬರ್,7,2025 (www.justkannada.in): ಕಬ್ಬಿಗೆ ಬೆಂಬಲ ಬೆಲೆ ನಿಗದಿಗೆ ಆಗ್ರಹಿಸಿ ರೈತರು ಧರಣಿ ನಡೆಸುತ್ತಿದ್ದು ಅತ್ತ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ ಕಿಡಿಕಾರಿದ್ದಾರೆ.
ಈ ಕುರಿತು ಮಾತನಾಡಿರುವ ಕೇಂದ್ರ ಸಚಿವ ವಿ.ಸೋಮಣ್ಣ, ಸಿದ್ದರಾಮಯ್ಯನವರೇ ಮಾತು ಎತ್ತಿದರೆ ಪ್ರಧಾನಿ ಮೋದಿ ಕಡೆ ಬೊಟ್ಟು ಮಾಡುತ್ತೀರಿ. ನಿಮಗೆ ಕೆಲಸ ಇಲ್ವಾ? ಮಾತೆತ್ತಿದರೆ ಸಾಕು ಪ್ರಧಾನಿ ಮೋದಿ ಬಳಿ ಚರ್ಚಿಸಲು ಸಂಸದರು ಬರಲ್ಲ ಅಂತಿರಿ. ನಾವು ಎಲ್ಲರೂ ಬರುತ್ತೇವೆ. ಆದರೆ ನಿಮ್ಮ ನಡವಳಿಕೆಯೇ ಸರಿಯಲ್ಲಿ ಸಿದ್ದರಾಮಯ್ಯ 2ನೇ ಬಾರಿ ಮುಖ್ಯಮಂತ್ರಿಯಾಗಿದ್ದೇ ವೇಸ್ಟ್ ಎಂದು ವಾಗ್ದಾಳಿ ನಡೆಸಿದರು.
1 ಟನ್ ಕಬ್ಬಿನ ದರವನ್ನ 3500 ರೂ.ಗೆ ನಿಗದಿ ಮಾಡುವಂತೆ ಆಗ್ರಹಿಸಿ ಬೆಳಗಾವಿ, ಬಾಗಲಕೋಟೆ ಸೇರಿ ಹಲವು ಕಡೆಗಳಲ್ಲಿ ರೈತರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದು, ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Key words: Siddaramaiah, second term, CM, waste, Union Minister, V. Somanna







