ಬೆಂಗಳೂರು,ನವೆಂಬರ್,6,2025 (www.justkannada.in): ಬಿಜೆಪಿ ಜೊತೆ ಕೇಂದ್ರ ಚುನಾವಣಾ ಆಯೋಗ ಶಾಮೀಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಆರೋಪಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ರಾಮಲಿಂಗರೆಡ್ಡಿ, ಬಿಜೆಪಿಯವರು ಮತಗಳ್ಳತನ ಮಾಡೋದು ಹೊಸದೇನು ಅಲ್ಲ. 2014ರಿಂದ ದೇಶದಲ್ಲಿ ವೋಟ್ ಚೋರಿ ಪ್ರಾರಂಭವಾಗಿದೆ. ಬಿಜೆಪಿ ಜೊತೆ ಕೇಂದ್ರ ಚುನಾವಣಾ ಆಯೋಗ ಶಾಮೀಲಾಗಿದೆ ಎಂದರು.
ಮಹಾರಾಷ್ಟ್ರ ಎಂಪಿ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟಕ್ಕೆ ಅಧಿಕ ಸ್ಥಾನ ಬಂದಿತು. ವಿಧಾನಸಭೆ ಚುನಾವಣೆಯಲ್ಲಿ ಗೆಲ್ತೀವಿ ಅಂತ ಮತಗಳ್ಳತನ ಮಾಡಿದರು. ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ವೇಳೆಯೇ ಮತಗಳ್ಳತನ ಬಗ್ಗೆ ಗೊತ್ತಾಯಿತು ಎಂದರು.
Key words: Vote Rigging, Central Election Commission, BJP, Minister Ramalingareddy







