ಬೆಂಗಳೂರು, ನವೆಂಬರ್,6,2025 (www.justkannada.in): ಲೋಕಸಭೆ ವಿಪಕ್ಷ ನಾಯಕ ರಾಹುಲ್‌ಗಾಂಧಿ ಮಾಡಿರುವ ಮತಗಳ್ಳತನ ಆರೋಪವನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಟನ್ ಗಟ್ಟಲೇ ದಾಖಲಾತಿಗಳನ್ನು ಪ್ರದರ್ಶಿಸಿ ಮತಗಳ್ಳತನ ಬಗ್ಗೆ ಆರೋಪ ಮಾಡಿದ್ದಾರೆ. ರಾಹುಲ್ ಗಾಂಧಿ ಅವರು ಕಾಟಚಾರಕ್ಕೆ ಹೇಳಿಕೆ ನೀಡಿಲ್ಲ. ಎಲ್ಲಾ ರೀತಿಯ ದಾಖಲಾತಿಗಳನ್ನು ಬಹಿರಂಗ ಪಡಿಸಿದ್ದಾರೆ. ಮತಗಳ್ಳತನವಾಗಿರುವುದು ನಿಜ ಎಂದರು.
ಮಾಜಿ ಸಚಿವ ಕೆ.ಎನ್ ರಾಜಣ್ಣ ಡಿನ್ನರ್ ಮೀಟಿಂಗ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, ಸ ಔತಣಕೂಟ ಅಲ್ಲ ಮನೆ ಊಟಕ್ಕೆ ಹೋಗೋದು ಸಿಎಂ ಸಿದ್ದರಾಮಯ್ಯ ತುಮಕೂರಿಗೆ ಬಂದಾಗ ಹೋಗ್ತಾರೆ. ಈ ಬಾರಿಯೂ ಸಿಎಂ ಕೇಳಿದ್ದಾರೆ. ಹೀಗಾಗಿ ಊಟಕ್ಕೆ ಹೋಗೋಣ ಎಂದೆ. ಯಾವುದೇ ರಾಜಕೀಯ ಚರ್ಚೆ ಆಗಲ್ಲ. ಊಟ ಮಾಡೋದು ಬರೋದು ಅಷ್ಟೆ ಎಂದರು.
Key words: Vote rigging, Rahul Gandhi, allegations, Home Minister, Parameshwar







