ರಾಹುಲ್ ಗಾಂಧಿ ಆರೋಪವನ್ನ ‘ಕೈ’ ನಾಯಕರೇ ಸಿರಿಯಸ್ ಆಗಿ ತೆಗೆದುಕೊಳ್ಳಲ್ಲ- ಸಿ.ಟಿ ರವಿ

ಬೆಂಗಳೂರು,ನವೆಂಬರ್,5,2025 (www.justkannada.in):  ಹರಿಯಾಣ ವಿಧಾನಸಭಾ ಚುನಾವಣೆಯಲ್ಲೂ ಮತಗಳ್ಳತನವಾಗಿದೆ ಎಂದು ಆರೋಪಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಎಂಎಲ್ ಸಿ ಸಿ.ಟಿ ರವಿ, ಮತ ಜೋರಿ ಆಗಿದ್ದರೇ ದೂರು ದಾಖಲಿಸಬಹುದಿತ್ತು. ರಾಹುಲ್ ಗಾಂಧಿಯದ್ದು ಆಧಾರ ರಹಿತ ಆರೋಪ. ತಮ್ಮ ಸೋಲನ್ನ ವ್ಯವಸ್ಥೆ ಮೇಲೆ ಕಟ್ಟುವ ಷಡ್ಯಂತ್ರ ಮಾಡಿದ್ದಾರೆ ಎಂದು ಕಿಡಿಕಾರಿದರು.

ರಾಹುಲ್ ಗಾಂಧಿ  ಹೇಳಿಕೆ ಕಾಂಗ್ರೆಸ್ ನವರಿಗೆ ಮುಜುಗರ ತರಿಸಿದೆ. ರಾಹುಲ್ ಗಾಂಧಿ ಅವರ ಆರೋಪವನ್ನ ಕಾಂಗ್ರೆಸ್ ನಾಯಕರೇ ಸಿರಿಯಸ್ ಆಗಿ ತೆಗೆದುಕೊಳ್ಳುವುದಿಲ್ಲ ಎಂದು  ಸಿ.ಟಿ ರವಿ ಲೇವಡಿ ಮಾಡಿದರು.

Key words: Vote rigging, allegations, conspiracy, system, C.T. Ravi