ಮೈಸೂರು,ನವೆಂಬರ್,5,2025 (www.justkannada.in): ಕಾರನ್ನು ರಿಪೇರಿಗೆ ಬಿಟ್ಟಿದ್ದ ವೇಳೆ ಕಾರಿನಲ್ಲಿದ್ದ ರಿವಾಲ್ವಾರ್ ನಾಪತ್ತೆಯಾಗಿದ್ದು ಈ ಸಂಬಂಧ ಮೈಸೂರಿನ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರೆಸ್ ರಿಪೋರ್ಟರ್ ಆಗಿರುವ ಕುಶಾಲನಗರ ಮಂಗಲಾ ಗ್ರಾಮದ ಕಾಫಿ ಎಸ್ಟೇಟ್ ಮಾಲೀಕ ತಿಮ್ಮಯ್ಯ ಅವರಿಗೆ ಸೇರಿದ್ದ ರಿವಾಲ್ವಾರ್ ನಾಪತ್ತೆಯಾಗಿದೆ. ಕಾಣೆಯಾದ ತಮ್ಮ ರಿವಾಲ್ವರ್ ಪತ್ತೆ ಹಚ್ಚಿಕೊಡುವಂತೆ ತಿಮ್ಮಯ್ಯ ಅವರು ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ತಿಮ್ಮಯ್ಯ ಅವರು ತಮ್ಮ ಆತ್ಮರಕ್ಷಣೆಗಾಗಿ 2016 ರಲ್ಲಿ .22 ಬೋರ್ ರಿವಾಲ್ವರ್ ಖರೀದಿಸಿ 100 ಲೈವ್ ಬುಲೆಟ್ ಗಳನ್ನೂ ಸಹ ಖರೀದಿಸಿದ್ದರು. ತಮ್ಮ ಫೋರ್ಡ್ ಕಾರನ್ನ ರಿಪೇರಿ ಮಾಡಿಸಲು ತಿಮ್ಮಯ್ಯ ಮೈಸೂರಿಗೆ ಆಗಮಿಸಿದ್ದರು. ಈ ಮಧ್ಯೆ ತಮ್ಮ ಪ್ಯಾಂಟ್ ಜೇಬಿನಲ್ಲಿದ್ದ ರಿವಾಲ್ವರ್ ಹಾಗೂ 8 ಜೀವಂತ ಗುಂಡುಗಳನ್ನ ಡ್ರೈವರ್ ಸೀಟ್ ನ ಜಿಪ್ ಪರ್ಸ್ ನಲ್ಲಿಟ್ಟಿದ್ದರು.
ಟಿಪ್ಪು ಸರ್ಕಲ್ ಬಳಿ ಇರುವ ಗ್ಯಾರೇಜ್ ನಲ್ಲಿ ಕಾರನ್ನ ರಿಪೇರಿಗೆ ಬಿಟ್ಟಿದ್ದರು. ರಿಪೇರಿಗೆ ಬಿಡುವ ಸಮಯದಲ್ಲಿ ತಿಮ್ಮಯ್ಯ ಅವರು ರಿವಾಲ್ವರ್ ತೆಗೆದುಕೊಂಡಿಲ್ಲ. ನಂತರ ರಿಪೇರಿಯಾದ ಕಾರನ್ನ ಹಿಂಪಡೆದು ತಾವು ತಂಗಿದ್ದ ಲಾಡ್ಜ್ ಗೆ ತಲುಪಿ ಪರಿಶೀಲಿಸಿದ್ದು, ಈ ವೇಳೆ ರಿವಾಲ್ವರ್ ನಾಪತ್ತೆಯಾಗಿದೆ. ಗ್ಯಾರೇಜ್ ಮಾಲೀಕನನ್ನ ವಿಚಾರಿಸಿದಾಗ ನನಗೆ ಗೊತ್ತಿಲ್ಲವೆಂದು ಉತ್ತರ ಕೊಟ್ಟಿದ್ದಾನೆ. ಇನ್ನು ಕಾಣೆಯಾದ ತಮ್ಮ ರಿವಾಲ್ವರ್ ಪತ್ತೆ ಹಚ್ಚಿಕೊಡುವಂತೆ ತಿಮ್ಮಯ್ಯ ಅವರು ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Key words: revolver, missing, car, repairs, Mysore







