ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಸ್ಥಾನ ಕೇಳಲು ಎಲ್ಲರಿಗೂ ಹಕ್ಕಿದೆ- ಶಾಸಕ ಹೆಚ್.ಸಿ ಬಾಲಕೃಷ್ಣ

ರಾಮನಗರ,ನವೆಂಬರ್,5,2025 (www.justkannada.in):  ನಮ್ಮ ಪಕ್ಷದಲ್ಲಿ ಸಿಎಂ ಆಗಲು ಎಲ್ಲರೂ ಸಮರ್ಥರಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಸ್ಥಾನ ಕೇಳಲು ಎಲ್ಲರಿಗೂ ಹಕ್ಕಿದೆ ಎಂದು ಶಾಸಕ ಹೆಚ್.ಸಿ ಬಾಲಕೃಷ್ಣ ಹೇಳಿದರು.

ಇಂದು ಮಾತನಾಡಿದ ಶಾಸಕ ಹೆಚ್.ಸಿ ಬಾಲಕೃಷ್ಣ, ನಮ್ಮ ಪಕ್ಷದಲ್ಲಿ ಸಿಎಂ ಆಗಲು ಎಲ್ಲರೂ ಸಮರ್ಥರಿದ್ದಾರೆ. ಆದರೆ ಹೈಕಮಾಂಡ್ ಅಂತಿಮ ತೀರ್ಮಾನ ಮಾಡೋದು.  ಮಕ್ಕಳು ಅತ್ತರೆ ತಾನೇ ಹಾಲು ಕುಡಿಸೋದು.  ಹೀಗಾಗಿ ಸಿಎಂ ಸ್ಥಾನದ ವಿಚಾರದಲ್ಲಿ ನಮ್ಮಲ್ಲಿ ಗೊಂದಲಗಳಿಲ್ಲ ಎಂದರು.

ನೀರಾವರಿ ವಿಚಾರವಾಗಿ ಡಿಸಿಎಂ  ಡಿಕೆ ಶಿವಕುಮಾರ್ ದೆಹಲಿಗೆ ಹೋಗಿದ್ದಾರೆ.  ರಾಜಕೀಯ ವಿಚಾರವಾಗಿ ಡಿಕೆ ಶಿವಕುಮಾರ್ ದೆಹಲಿಗೆ ಹೋಗಿಲ್ಲ. ಏನು ಮಾತನಾಡದಂತೆ ಡಿಕೆ ಶಿವಕುಮಾರ್ ಹೇಳಿದ್ದಾರೆ. ಎಲ್ಲಾ ಪಕ್ಷಗಳಲ್ಲೂ ಬಣಗಳಿವೆ. ನಮ್ಮ ಹೈಕಮಾಂಡ್ ಬಲಿಷ್ಠವಾಗಿದೆ ಎಂದರು.  ಹೆಚ್ ಸಿ ಬಾಲಕೃಷ್ಣ ರಾಮನಗರ

ನನಗೆ ಮಂತ್ರಿ ಸ್ಥಾನ ಸಿಗುವುದರ ಬಗ್ಗೆ ಹೈಕಮಾಂಡ ತೀರ್ಮಾನಿಸುತ್ತೆ. ಡಿಸೆಂಬರ್ ಗೆ ಸಂಪುಟ ವಿಸ್ತರಣೆಯ ಊಹಾಪೋಹವಿದೆ ಎಂದು ಹೆಚ್.ಸಿ ಬಾಲಕೃಷ್ಣ ತಿಳಿಸಿದರು.

Key words: CM post, Congress party, MLA, H.C. Balakrishna