ಬೆಂಗಳೂರು, ನವೆಂಬರ್, 4, 2025 (www.justkannada.in): ವಾಲ್ ಮಾರ್ಟ್ ವೃದ್ದಿ ತನ್ನ ಕಾರ್ಯಕ್ರಮ ಪಾಲುದಾರರಾದ ಐಡಿಯಾ ಟು ಇಂಪ್ಯಾಕ್ಟ್ ಫೌಂಡೇಶನ್(Ideas to Impact Foundation) , ಎಂಟರ್ ಪ್ರೆನರ್ ಶಿಪ್ ಅಂಡ್ ಲೈವ್ ಲಿಹುಡ್ ಡಿಪಾರ್ಟ್ ಮೆಂಟ್ ಆಫ್ ಸ್ಕಿಲ್ ಡೆವಲಪ್ ಮೆಂಟ್(Entrepreneurship and Livelihood Department of Skill Development) ಮತ್ತು ನ್ಯಾಷನಲ್ ಲೈವ್ ಲಿಹುಡ್ ಮಿಷನ್(National Livelihood Mission) ಒಪ್ಪಂದ ಪತ್ರಕ್ಕೆ (MoU)ಗೆ ಸಹಿ ಮಾಡಿದೆ.
ಈ ಮೂರು ವರ್ಷದ ಒಪ್ಪಂದವು ಕರ್ನಾಟಕದಾದ್ಯಂತ ಎಂಎಸ್ ಎಂಇ ಗಳಿಗೆ ಉಚಿತ ಡಿಜಿಟಲ್ ಕಲಿಕಾ ಸಂಪನ್ಮೂಲಗಳು ಮತ್ತು ವ್ಯವಹಾರ ಉಪಕರಣಗಳ ಮೂಲಕ ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬೆಳವಣಿಗೆ, ವಿಸ್ತರಣೆ ಮತ್ತು ಸ್ಪರ್ಧಾತ್ಮಕತೆಯ ಹೊಸ ಅವಕಾಶಗಳನ್ನು ನೀಡುವ ಉದ್ದೇಶವನ್ನು ಹೊಂದಿದೆ.
MoU, 2028ರೊಳಗೆ 1,00,000 ಎಂಎಸ್ ಎಂಇಗಳು ಮತ್ತು ಸ್ಥಳೀಯ ಮಹಿಳಾ ಉದ್ಯಮಿಗಳನ್ನು ಶಕ್ತಿಪಡಿಸುವ ವಾಲ್ಮಾರ್ಟ್ ವೃದ್ಧಿ(Walmart Vriddhi)ಯ ಧ್ಯೇಯದತ್ತ ಒಂದು ಪ್ರಮುಖ ಹೆಜ್ಜೆ, ಈ ಕಾರ್ಯಕ್ರಮವು ಕರ್ನಾಟಕದ ಎಸ್ ಎಚ್ ಜಿ(Self Help Group)ಗಳ ಸಾಮರ್ಥ್ಯ ನಿರ್ಮಾಣದತ್ತವೂ ಮುಂದುವರಿಯಲಿದೆ. ಎಸ್ ಎಚ್ ಜಿ(SHG) ಗಳಿಗೆ ಉಚಿತವಾಗಿ ತರಬೇತಿ ಕಾರ್ಯಕ್ರಮಗಳು ಮತ್ತು ಡಿಜಿಟಲ್ ಉಪಕರಣಗಳ ಪ್ರವೇಶವನ್ನು ನೀಡಲಾಗುತ್ತದೆ. ಇದು ಉದ್ಯಮಶೀಲತೆಯನ್ನು ಬಲಪಡಿಸಲು ಮತ್ತು ಸ್ಪರ್ಧಾತ್ಮಕತೆಯನ್ನು ವೃದ್ಧಿಸಲು ನೆರವಾಗುತ್ತದೆ.
ನ್ಯಾಷನಲ್ ಲೈವ್ ಲಿಹುಡ್ ಮಿಷನ್ (National Livelihood Mission) ತನ್ನ ಎಸ್ ಎಚ್ ಜಿ (SHG) ಗಳ ಮತ್ತು ಫೆಡರೇಷನ್ ಗಳ ಮೂಲಕ ಈ ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸಿ, ವಾಲ್ ಮಾರ್ಟ್ ವೃದ್ಧಿ ಉಪಕ್ರಮಗಳು ರಾಜ್ಯದ ಎಲ್ಲ ಉದ್ಯಮಿಗಳಿಗೆ ತಲುಪುವಂತೆ ಖಚಿತಪಡಿಸುತ್ತದೆ.
ಈ ವೇಳೆ ಮಾತನಾಡಿದ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಚಿವ ಡಾ. ಶರಣಪ್ರಕಾಶ ಪಾಟೀಲ್, “ಕರ್ನಾಟಕದ ಅಭಿವೃದ್ಧಿ ದೃಷ್ಟಿಕೋನವು ಜನರನ್ನು ಮತ್ತು ಜೀವನೋಪಾಯವನ್ನು ಅದರ ಹೃದಯದಲ್ಲಿ ಇಟ್ಟುಕೊಂಡಿದೆ. ನಮ್ಮ ಗಮನವು Self Help Group ಗಳು ಮತ್ತು ಸಣ್ಣ ಉದ್ಯಮಗಳನ್ನು ಬದಲಾವಣೆಗೊಳಗಾದ ಆರ್ಥಿಕತೆಯಲ್ಲಿ ಯಶಸ್ವಿಯಾಗಲು ಅಗತ್ಯವಾದ ಕೌಶಲ್ಯ ಮತ್ತು ಸಾಮರ್ಥ್ಯಗಳಿಂದ ಶಕ್ತಿಪಡಿಸುವುದರ ಮೇಲೆ ಇದೆ. ನಾವು ಸಂಘಟನಾ ತರಬೇತಿ, ಉದ್ಯಮಾಭಿವೃದ್ಧಿ ಮತ್ತು ಡಿಜಿಟಲ್ ಸಬಲೀಕರಣದಲ್ಲಿ ಹೂಡಿಕೆ ಮಾಡುತ್ತಿದ್ದೇವೆ, ಇದರಿಂದ ಅವರು ಸ್ಥಿರವಾಗಿ ಬೆಳೆಯಲು ಮತ್ತು ವಿನ್ನತ ಮಾರುಕಟ್ಟೆಗಳಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ. ಕೌಶಲ್ಯಯುತ, ಸ್ವಾವಲಂಬಿ ಮತ್ತು ಡಿಜಿಟಲ್ ಸಾಮರ್ಥ್ಯ ಹೊಂದಿದೆ ಕಾರ್ಯಬಲವನ್ನು ಬೆಳೆಸುವ ಮೂಲಕ, ರಾಜ್ಯದ ಬೆಳವಣಿಗೆಯಲ್ಲಿ ಪ್ರತಿಯೊಂದು ಸಮುದಾಯಕ್ಕೂ ತಾಲು ಸಿಗುವಂತೆ ಮಾಡುವುದೇ ನಮ್ಮ ಉದ್ದೇಶ ಎಂದರು.
ರಾಜ್ಯದ ಮುಖ್ಯಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಮಾತನಾಡಿ, “ಕರ್ನಾಟಕವು ಸದಾ ಉದ್ಯಮ ಮತ್ತು ಆರ್ಥಿಕ ಪ್ರಗತಿಯ ಮುಂಚೂಣಿಯಲ್ಲಿದೆ. ರಾಜ್ಯದ ಗಮನವು ಜಾಗತಿಕವಾಗಿ ಸ್ಪರ್ಧಾತ್ಮಕ ಮತ್ತು ಡಿಜಿಟಲ್ ಸಬಲೀಕೃತ ಎಂಎಸ್ ಎಂಇ ಮತ್ತು ಎಸ್ ಎಚ್ ಜಿ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವುದರ ಮೇಲೆ ಇದೆ. ಇ-ವಾಣಿಜ್ಯ (eCommerce) ಈ ಪ್ರಯಾಣದಲ್ಲಿ ಶಕ್ತಿಯಾದ ಉತ್ಸಾಹಕವಾಗಿ ಹೊರಹೊಮ್ಮಿದೆ. ಸಣ್ಣ ಉದ್ಯಮಗಳಿಗೆ ಹೊಸ ಮಾರುಕಟ್ಟೆ ಮತ್ತು ಬೆಳವಣಿಗೆಯ ಅವಕಾಶಗಳನ್ನು ತೆರೆದಿದೆ. ಜಾಗತಿಕ ಪರಿಣತಿ ಮತ್ತು ಸ್ಥಳೀಯ ಉದ್ಯಮಶೀಲತೆಯನ್ನು ಒಟ್ಟುಗೂಡಿಸುವ ಇಂತಹ ಸಹಯೋಗಗಳು ಎಸ್ಎಚ್ ಜಿಗಳ ಡಿಜಿಟಲ್ ಮತ್ತು ಮಾರುಕಟ್ಟೆ ಸಿದ್ಧತೆಯನ್ನು ಬಲಪಡಿಸಿ, ಉದ್ಯೋಗ ಸೃಷ್ಟಿ ಮತ್ತು ರಾಜ್ಯದ ಆರ್ಥಿಕ ಬೆಳವಣಿಗೆಯಲ್ಲಿ ಅವರ ಕೊಡುಗೆಯನ್ನು ಹೆಚ್ಚಿಸಲಿದೆ ಎಂದರು.
“SHG ಗಳಿಗೆ ಡಿಜಿಟಲ್ ಉಪಕರಣಗಳು, ವ್ಯವಹಾರ ತರಬೇತಿ ಮತ್ತು ಮಾರುಕಟ್ಟೆ ಪ್ರವೇಶವನ್ನು ನೀಡುವ ಮೂಲಕ, ನಾವು ಸ್ಥಳೀಯ ಉದ್ಯಮಗಳಿಗೆ ಅವರ ಸ್ಪರ್ಧಾತ್ಮಕತೆಯನ್ನು ಬಲಪಡಿಸಲು ಮತ್ತು ಸ್ಥಳೀಯ ಪ್ರಭಾವವನ್ನು ರಾಷ್ಟ್ರೀಯ ಹಾಗೂ ಜಾಗತಿಕ ಅವಕಾಶಗಳಲ್ಲಿ ಪರಿವರ್ತಿಸಲು ಸಹಾಯ ಮಾಡುತ್ತಿದ್ದೇವೆ.”
ಫ್ಲಿಫ್ ಕಾರ್ಟ್ ಗ್ರೂಪ್ ನ ಕಾರ್ಪೊರೇಟ್ ವ್ಯವಹಾರಗಳ ಅಧಿಕಾರಿ ರಜನೀಶ್ ಕುಮಾರ್ ಮಾತನಾಡಿ, ಎಚ್ ಎಚ್ ಜಿ ಗಳು ಭಾರತದ ಬೆಳವಣಿಗೆಯ ಪ್ರಮುಖ ಕೊಂಡಿ. ದೇಶದ ಪ್ರಮುಖ ಡಿಜಿಟಲ್ ವಾಣಿಜ್ಯ ವೇದಿಕೆಗಳಲ್ಲಿ ಒಂದಾದ ಫ್ಲಿಫ್ ಕಾರ್ಟ್, ಡಿಜಿಟಲ್ ಆರ್ಥಿಕತೆಯಲ್ಲಿ ಯಶಸ್ವಿಯಾಗಲು ಅಗತ್ಯವಾದ ಕೌಶಲ್ಯಗಳನ್ನು ಅವರಿಗೆ ನೀಡುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಈ ಸಹಭಾಗಿತ್ವದ ಮೂಲಕ, ವಾಲ್ ಮಾರ್ಟ್ ವೃದ್ದಿಯ ಪದವೀಧರರು ಫ್ಲಿಫ್ ಕಾರ್ಟ್ ನ ಡಿಜಿಟಲ್ ಪರಿಸರಕ್ಕೆ ನೇರವಾಗಿ ಸಂಪರ್ಕ ಹೊಂದುತ್ತಾರೆ ಸರಬರಾಜು ಸರಪಳಿ ಜಾಲಗಳು ಮತ್ತು ಡೇಟಾ ಆಧಾರಿತ ಒಳನೋಟಗಳಿಂದ, ಅವರು ವೇಗವಾಗಿ ವಿಸ್ತರಿಸಲು ಅಗತ್ಯವಾದ ಅಂಚು ಪಡೆಯುತ್ತಾರೆ ಎಂದರು.
Key words: local MSMEs, State government , Walmart Vriddhi







