ಬೆಂಗಳೂರು,ನವೆಂಬರ್,4,2025 (www.justkannada.in): ಕಾಂಗ್ರೆಸ್ ಶಾಸಕ ಹೆಚ್.ವೈ ಮೇಟಿ ಅತ್ಯಂತ ನಿಷ್ಠಾವಂತ, ನನಗೆ ತುಂಬಾ ಆಪ್ತರಾಗಿದ್ದರು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಅನಾರೋಗ್ಯದಿಂದ ಇಂದು ಕಾಂಗ್ರೆಸ್ ಹಿರಿಯ ಶಾಸಕ ಮಾಜಿ ಸಚಿವ ಹೆಚ್ ವೈ ಮೇಟಿ ನಿಧನರಾದ ವಿಷಯ ತಿಳಿದು ಮೈಸೂರಿನಿಂದ ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಹೆಚ್ ವೈ ಮೇಟಿ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೂರು ದಿನಗಳ ಹಿಂದೆ ಶಾಸಕ ಮೇಟಿ ಅವರನ್ನು ಭೇಟಿಯಾಗಿದ್ದೆ. ಮೇಟಿ ಗುಣಮುಖರಾಗುತ್ತಾರೆ ಎಂದು ವೈದ್ಯರು ಹೇಳಿದ್ದರು. ನಾನು ಭೇಟಿ ಮಾಡಿದ್ದಾಗ ಮೇಟಿ ಚೆನ್ನಾಗಿ ಮಾತನಾಡಿದ್ದರು ಮೇಟಿ ಇಷ್ಟು ಬೇಗ ಸಾಯುತ್ತಾರೆ ಅಂದು ಕೊಂಡಿರಲಿಲ್ಲ
ಮೇಟಿ ಬಹಳ ನಿಯತ್ತಾಗಿದ್ದ ಮನುಷ್ಯ ನನಗೆ ಬಹಳ ಲಾಯಲ್ ಆಗಿ ಇದ್ದ ರಾಜಕಾರಣಿ ನಾನು ಭೇಟಿ ಮಾಡಿದ್ದಾಗ ಮೇಟಿ ಚೆನ್ನಾಗಿ ಮಾತನಾಡಿದ್ದರು ಎಷ್ಟು ಬೇಗ ಸಾಯುತ್ತಾರೆ. ನನಗಿಂತಲೂ ಅವರು ದೊಡ್ಡವರು. ಎಚ್ ವೈ ಮೇಟಿ ಅವರ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
Key words: HY Meti, loyal, close, CM Siddaramaiah







