ಮಂಡ್ಯ,ನವೆಂಬರ್,3,2025 (www.justkannada.in): ಚಾಲಕನ ನಿಯಂತ್ರಣ ತಪ್ಪಿ ಕಾರು ವಿಸಿ ನಾಲೆಗೆ ಬಿದ್ದ ಘಟನೆ ಮಂಡ್ಯ ತಾಲೂಕಿನ ಬಿ.ಯರಹಳ್ಳಿ ಬಳಿ ನಡೆದಿದೆ.
ಬೆಳಗಿನ ಜಾವ 4:30ರ ಸಮಯದಲ್ಲಿ ಈ ಘಟನೆ ನಡೆದಿದೆ. ಮಂಡ್ಯದ ಕಲ್ಲಹಳ್ಳಿ ನಿವಾಸಿ ಕೃಷ್ಣ ಎಂಬುವರು ಕಾರಿನಲ್ಲಿ ತೆರಳುತಿದ್ದ ವೇಳೆ ಬಿ.ಯರಹಳ್ಳಿ ಬಳಿ ಕಾರು ಚಾಲಕನ ನಿಯಂತ್ರಣ ತಪ್ಪಿ ವಿಸಿ ನಾಲೆಗೆ ಬಿದ್ದಿದೆ.
ಕಿರಿದಾದ ರಸ್ತೆ, ತಡೆಗೋಡೆ ಇಲ್ಲದ ಕಾರಣ ಅವಘಡ ಸಂಭವಿಸಿದೆ ಎನ್ನಲಾಗಿದ್ದು, ಕಾರು ನಾಲೆಗೆ ಬಿದ್ದ ತಕ್ಷಣ ಚಾಲಕ ಕೃಷ್ಣ ಕಾರಿನಿಂದ ಹೊರಬಂದಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿಗಳು ನಾಲೆಯಲ್ಲಿ ಮುಳುಗಿದ್ದ ಕಾರು ಮೇಲೆತ್ತಿದ್ದಾರೆ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
Key words: Driver loses, control, car, falls, VC canal







