ಕೇಂದ್ರದಿಂದ  ಮಲತಾಯಿ ಧೋರಣೆ: ಯುವ ಜನತೆ ಎದ್ದು ನಿಂತು ಕನ್ನಡವನ್ನ ಜಗತ್ತಿಗೆ ಪಸರಿಸಿ- ಸಿಎಂ ಸಿದ್ದರಾಮಯ್ಯ ಕರೆ

ಬೆಂಗಳೂರು,ನವೆಂಬರ್,1,2025 (www.justkannada.in):  ಕೇಂದ್ರ ಸರ್ಕಾರದ ಕನ್ನಡ ಭಾಷೆ ವಿಷಯದಲ್ಲಿ ಮಲತಾಯಿ ಧೋರಣೆ ತಾಳುತ್ತಿದೆ. ಯುವ ಜನತೆ ಎದ್ದು ನಿಂತು ಕನ್ನಡವನ್ನ ಜಗತ್ತಿಗೆ ಪಸರಿಸಿ ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದರು.

ಇಂದು ನಾಡಿನೆಲ್ಲಡೆ ಕನ್ನಡ ರಾಜ್ಯೋತ್ಸವದ ಸಂಭ್ರಮವಾಗಿದ್ದು ಕಂಠೀರವ ಸ್ಟೇಡಿಯಂನಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನಡೆಸಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.

ಕರ್ನಾಟಕ ವಿಚಾರದಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ. ಕನ್ನಡದ ಮೇಲೆ ಹಿಂದಿ ಭಾಷೆಯನ್ನ ಹೇರಿಕೆ ಮಾಡಲಾಗುತ್ತಿದೆ.  ಅನುದಾನ ನೀಡುವಲ್ಲಿ ತಾರತಮ್ಯ  ತೋರುತ್ತಿದೆ. ಹಣ ಸರಿಯಾಗಿ ನೀಡುತ್ತಿಲ್ಲ  ನಮ್ಮ ಸವಾಲುಗಳನ್ನ ನಮ್ಮ ಅವಕಾಶಗಳನ್ನಾಗಿ ಮಾಡಿಕೊಳ್ಳಬೇಕು. ದೇಶದ ಹೂಡಿಕೆಯಲ್ಲಿ ಕರ್ನಾಟಕ ನಂ 1 ಇದೆ . ವಿದ್ಯುತ್ ಉತ್ಪಾದನೆಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ ಎಂದರು.

180  ಮದರಸಾಗಳಲ್ಲಿ ಕನ್ನಡ ಕಡ್ಡಾಯ ಮಾಡಲಾಗಿದೆ. 483 ಕೋಟಿ  ರೂ. ವೆಚ್ಚದಲ್ಲಿ ಉರ್ದು ಶಾಲೆಗಳನ್ನ ಅಭಿವೃದ್ದಿ ಮಾಡಲಾಗಿದೆ   ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಪ್ರತ್ಯೇಕ ವೈದ್ಯಕೀಯ ಶಾಲೆ ಆರಂಭ, 18 ಸಾವಿರಕ್ಕೂ ಹೆಚ್ಚು ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುತ್ತದೆ  ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

Key words: Kannada Rajyotsava, CM Siddaramaiah, Flag hoisting