ಸ್ಪೀಕರ್ ವಿರುದ್ದ ಭ್ರಷ್ಟಾಚಾರ ಆರೋಪ: ನ್ಯಾಯಾಂಗ ತನಿಖೆಗೆ ಸಂಸದ ಕಾಗೇರಿ ಆಗ್ರಹ

ಬೆಂಗಳೂರು,ಅಕ್ಟೋಬರ್,31,2025 (www.justkannada.in):  ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್ ವಿರುದ್ದ ಭ್ರಷ್ಟಾಚಾರ ಆರೋಪ ಮಾಡಿರುವ ಬಿಜೆಪಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ನ್ಯಾಯಾಂಗ ತನಿಖೆಗೆ ಆಗ್ರಹಿಸಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ,  ಸ್ಪೀಕರ್ ಯುಟಿ ಖಾದರ್ ವಿರುದ್ದ ಭ್ರಷ್ಟಾಚಾರ ಆರೋಪ ಕೇಳಿ ಬಂದಿದೆ.  ಖಾದರ್ ಭ್ರಷ್ಟಾಚಾರ ಮಾಡಿದ್ದಾರೆ ಎಂದಿದ್ದೇನೆ.  ನ್ಯಾಯಾಂಗ ತನಿಖೆಗೆ ಒಳಪಡಿಸಿ ಎಂದಿದ್ದೇನೆ.  ಸಾರ್ವಜನಿಕ ವಲಯದಲ್ಲಿ ಆರೋಪ ಕೇಳಿಬಂದಿದೆ. ಹೀಗಾಗಿ ನ್ಯಾಯಾಂಗ ತನಿಖೆ ಎದುರಿಸಲಿ ಹೆಚ್ಚೇನು ಹೇಳುವುದಿಲ್ಲ ಎಂದರು.

ವಿಧಾನಸಭೆಯಲ್ಲಿ ಮರದ ಕೆತ್ತನೆಯ ಪ್ರಧಾನ ಬಾಗಿಲು,  ಶಾಸಕರ ಭವನದಲ್ಲಿ ಹಾಸಿಗೆ ದಿಂಬು ಇತರೆ ವಸ್ತುಗಳ ಖರೀದಿ, ಈ ಸಂಬಂಧ ಕೋಟ್ಯಾಂತರ ದುಂದು ವೆಚ್ಚ ಮಾಡಲಾಗಿದೆ.  ಪುಸ್ತಕಮೇಳಕ್ಕೆ   4.5 ಕೋಟಿ ವೆಚ್ಚ ಖರ್ಚು ಮಾಡಿದ್ದು. ಸ್ಪೀಕರ್ ಖಾದರ್  ಈ ರೀತಿ ಮಾಡುವ ಅವಶ್ಯಕತೆ ಇತ್ತಾ?  ಬೇಕಾದವರಿಗೆ ಟೆಂಡರ್ ಕೊಟ್ಟಿದ್ದಾರೆ ಎಂದು ಕಳೆದ ಎರಡು ದಿನಗಳ ಹಿಂದೆ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪಿಸಿದ್ದರು.

Key words: Corruption, allegations, Speaker,UT Khadar, judicial probe, MP, Kageri