ಬೆಂಗಳೂರು,ಅಕ್ಟೋಬರ್,30,2025 (www.justkannada.in): ಮಾಧ್ಯಮ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಂಡ್ಯದ ಎಂ.ಸಿದ್ದರಾಜು ಅವರಿಗೆ 2025ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಒಲಿದಿದೆ.
ಇಂದು 2025ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದ್ದು ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ 70 ಸಾಧಕರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹಾಗೆಯೇ ಮಾಧ್ಯಮ ಕ್ಷೇತ್ರದಲ್ಲಿ ಎಂ.ಸಿದ್ದರಾಜು ಅವರಿಗೆ ಪ್ರಶಸ್ತಿ ಒಲಿದಿದೆ.
ಎಂ ಸಿದ್ದರಾಜು ಅವರು 1976-77ರಲ್ಲಿ ನವ ಭಾರತ ಪತ್ರಿಕೆಯಲ್ಲಿ ನಂತರ ಪಿಟಿಐಗೆ ಸೇರಿ ಸುಮಾರು 37 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಪಿಟಿಐನ ಸೌಥ್ ಇಂಡಿಯಾ ಹೆಡ್ ಆಗಿ ಸೇವೆ ಸಲ್ಲಿಸಿದ್ದಾರೆ. ಜತೆಗೆ ನಾಲ್ಕು ಬಾರಿ ಬೆಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷರಾಗಿ 2016ರಲ್ಲಿ ಮಾಧ್ಯಮ ಆಕಾಡಮಿ ಅಧ್ಯಕ್ಷರಾಗಿದ್ದರು. ಈ ವೇಳೆ ಇಡೀ ಕರ್ನಾಟಕ ಸುತ್ತಾಡಿ ವಿನೂತನ ಕಾರ್ಯಕ್ರಮ ರೂಪಿಸಿದ್ದರು. ಎಂ.ಸಿದ್ದರಾಜು ಅವರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳು ಲಭಿಸಿವೆ.
Key words: Kannada Rajyotsava Award, M. Siddharaju







