ಮಂಡ್ಯ,ಅಕ್ಟೋಬರ್,28,2025 (www.justkannada.in): ಸಂಪುಟ ಬದಲಾಗುತ್ತೋ ನಾಯಕತ್ವ ಬದಲಾಗುತ್ತೋ ಗೊಂದಲವಿಲ್ಲದೆ ಒಳ್ಳೆಯ ರೀತಿ ತೀರ್ಮಾನ ಆಗುತ್ತದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿಕೆ ನೀಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ಶಾಸಕರು ಎಷ್ಟು ಮುಖ್ಯವೋ ನಾಯಕತ್ವವೂ ಅಷ್ಟೇ ಮುಖ್ಯ. ಗೊಂದಲವಿಲ್ಲದೆ ಒಳ್ಳೆಯ ರೀತಿಯಲ್ಲಿ ತೀರ್ಮಾನ ಆಗುತ್ತದೆ. ಪರಮೇಶ್ವರ್ ಕಾಂಗ್ರೆಸ್ ಅಧ್ಯಕ್ಷ. ಸಿಎಂ ಬದಲಾವಣೆ ಬಗ್ಗೆ ನಮ್ಮೊಂದಿಗೆ ಮಾತಾಡಿಲ್ಲ ಎಂದಿದ್ದಾರೆ ಅದರ ಬಗ್ಗೆ ನಾನು ಏನು ಹೇಳೋಕೆ ಆಗಲ್ಲ ಎಂದರು.
ಸಿಎಂ ಮತ್ತು ಡಿಸಿಎಂ ನಡುವೆ ಒಳ್ಳೆ ರೀತಿ ತೀರ್ಮಾನ ಆಗುತ್ತೆ. ಬಿಜೆಪಿ ರೀತಿ ಆಗಲ್ಲ. ಬಿಹಾರ ಚುನಾವಣೆ ಮುಗಿದ ಬಳಿಕ ಎಲ್ಲವನ್ನೂ ತೀರ್ಮಾನ ಮಾಡುತ್ತಾರೆ ಎಂದು ಸಚಿವ ಚಲುವರಾಯಸ್ವಾಮಿ ತಿಳಿಸಿದರು.
Key words: CM, Change, decision, Minister, Chaluvarayaswamy







