ಬೆಂಗಳೂರು, ಅಕ್ಟೋಬರ್,28,2025 (www.justkannada.in): ನಿನ್ನೆ ಹೈಕಮಾಂಡ್ ಹೇಳಿದರೆ ನಾನೇ ಪೂರ್ಣಾವಧಿ ಸಿಎಂ ಎಂದು ನಿನ್ನೆ ಹೇಳಿಕೆ ನೀಡಿದ ಬೆನ್ನಲ್ಲೆ ಸಿಎಂ ಸಿದ್ದರಾಮಯ್ಯ ಸಾಫ್ಟ್ ಆಗಿದ್ದಾರೆಂಬ ಮಾತುಗಳು ಕೇಳಿ ಬಂದಿದ್ದವು. ಈ ಕುರಿತು ಇದೀಗ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿರುವ ಗೃಹ ಸಚಿವ ಪರಮೇಶ್ವರ್, ಸಿಎಂ ಸಾಫ್ಟ್ ಆಗಿದ್ದಾರೆ ಅಂತಾ ಯಾರು ರೇಟಿಂಗ್ ಕೊಟ್ಟಿದ್ದು? ಸಾಫ್ಟ್ ಆಗಿದ್ದಾರೆ ಸ್ಟ್ರಾಂಗ್ ಆಗಿದ್ದಾರೆ ಎಂಬುದು ಇಲ್ಲ ಎಂದರು.
2028ರಲ್ಲೂ ಸ್ಪರ್ಧಿಸುವಂತೆ ಒತ್ತಾಯವಿದೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ಸಂಬಂಧ ಪ್ರತಿಕ್ರಿಯಿಸಿದ ಪರಮೇಶ್ವರ್, ಮುಂದೆಯೂ ಸ್ಪರ್ಧೆ ಮಾಡೋದು ಅವರ ವೈಯಕ್ತಿಕ. 2028ರಲ್ಲೂ ನೀವು ಸ್ಪರ್ಧಿಸಿ ಬೇಡಿ ಎಂದು ಹೇಳೋಕೆ ಆಗಲ್ಲ/ ಅದು ಸಿಎಂ ಸಿದ್ದರಾಮಯ್ಯನವರ ವೈಯಕ್ತಿಕ ವಿಚಾರ ಎಂದರು.
ದಲಿತ ಸಿಎಂ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ಅವರವರ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ ಏನೇ ಇದ್ದರೂ ಹೈಕಮಾಂಡ್ ತೀರ್ಮಾನಸುತ್ತೆ. ಈ ಬಗ್ಗೆ ಪದೇ ಪದೇ ಹೇಳಿಕೆ ಕೊಡೋದು ಸರಿಯಲ್ಲ ಇದು ಎಲ್ಲಿಗೆ ಹೋಗಿ ನಿಲ್ಲುತ್ತೋ ಗೊತ್ತಿಲ್ಲ ನಿನ್ನೆ ಸಿಎಂ ಕೂಡ ಹೇಳಿದ್ದಾರೆ. ಹೈಕಮಾಂಡ್ ತೀರ್ಮಾನವನ್ನ ನಾವೆಲ್ಲರೂ ಒಪ್ಪುತ್ತೇವೆ ಎಂದು ತಿಳಿಸಿದರು.
Key words: CM, Siddaramaiah, soft, Home Minister, Parameshwar







