ನವೆಂಬರ್ ಕ್ರಾಂತಿ ಆಗಲ್ಲ, ಆಗಲು ಹೈಕಮಾಂಡ್ ಬಿಡಲ್ಲ- ಸಚಿವ ಸತೀಶ್ ಜಾರಕಿಹೊಳಿ

ಬೆಂಗಳೂರು,ಅಕ್ಟೋಬರ್,27,2025 (www.justkannda.in) ರಾಜ್ಯದಲ್ಲಿ ನವೆಂಬರ್ ಕ್ರಾಂತಿ ಆಗಲ್ಲ. ಆಗಲು ಹೈಕಮಾಂಡ್ ಬಿಡಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ನವೆಂಬರ್ ಕ್ರಾಂತಿ ಆಗಲ್ಲ ಇನ್ನೂ 20ರಿಂದ 30ದಿನ ಇದೆ. ಏನಾಗುತ್ತೆ ನೋಡೋಣ. ಕ್ರಾಂತಿ ಆಗಲು ಹೈಕಮಾಂಡ್ ಬಿಡಬೇಕಲ್ಲ ಹೈಕಮಾಂಢ್ ಹಾಗೆ ಮಾಡಲು ಬಿಡಲ್ಲ ಎಂದರು

ಏಕನಾಥ್ ಶಿಂಧೆ ಒಬ್ಬರೇ,  ಪವಾರ್ ಒಬ್ಬರೇ ಇನ್ನೊಬ್ಬ ಶಿಂಧೆ,  ಪವರ್ ಹುಟ್ಟಿಕೊಳ್ಳಲು ಆಗಲ್ಲ ಎಂದು   ಸತೀಶ್ ಜಾರಕಿಹೊಳಿ ಹೇಳಿದರು.

ದಲಿತ ಸಿಎಂ  ಕುರಿತು ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ಅವಕಾಶ ಬರುವವರೆಗೆ ಕಾಯಬೇಕು. ಈಗಂತೂ ಅವಕಾಶ ಇಲ್ಲ ಸಮಯಕ್ಕಾಗಿ ಕಾಯಬೇಕು. ಅವಕಾಶ  ಸೃಷ್ಠಿಯಾಗಬೇಕು. ಅಲ್ಲಿವರೆಗೆ ಕಾಯಬೇಕು ಎಂದರು.

Key words: November Revolution, High Command, Minister, Sathish Jarkiholi