ಕೆ.ಎಚ್ ಮುನಿಯಪ್ಪ ಸಿಎಂ ಆದ್ರೆ ಸ್ವಾಗತ ಮಾಡ್ತೇನೆ- ಗೃಹ ಸಚಿವ ಪರಮೇಶ್ವರ್

ಬೆಂಗಳೂರು,ಅಕ್ಟೋಬರ್,27,2025 (www.justkannada.in):  ಕೆಎಚ್ ಮುನಿಯಪ್ಪ ಸಿಎಂ ಆದರೆ ನಾನು ಸ್ವಾಗತ ಮಾಡುತ್ತೇನೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಕೆಎಚ್ ಮುನಿಯಪ್ಪ ಸಿಎಂ ಆದರೆ ಸಂತೋಷ ಪಡುತ್ತೇನೆ. ತುಳಿತಕ್ಕೊಳಗಾಗಿರೋ ವರ್ಗಕ್ಕೆ ಆಡಳಿತ ಬೇಕಿದೆ ಆ ವರ್ಗಕ್ಕೆ ಅಡಳಿತ ಸಿಗುತ್ತೆ ಅಂದರೆ ಸ್ವಾಗತ ಎಂದರು.

ಧರ್ಮಸ್ಥಳ ಪ್ರಕರಣಕ್ಕೆ  ಸಂಬಂಧಿಸಿದಂತೆ ಅಕ್ಟೋಬರ್ 31ರೊಳಗೆ ಎಸ್ ಐಟಿ ಅಧಿಕಾರಿಗಳು ವರದಿ ಸಲ್ಲಿಸಲಿದ್ದಾರೆ. ಒಂದೆರಡು ದಿನ ಹಿಂದೆ ಮುಂದೆ ಆಗಬಹುದು ಅಷ್ಟೇ. ಎಲ್ಲವನ್ನು ಸೇರಿಸಿ ಕೊಡಲು ಹೇಳಿದ್ದೇವೆ ಯಾವ ರೀತಿ ವರದಿ ಕೊಡುತ್ತಾರೆ ಅನ್ನುವುದು ನೋಡಬೇಕು  ಎಂದು ಪರಮೇಶ್ವರ್ ತಿಳಿಸಿದರು.

Key words: K. H. Muniappa, as, CM, welcome, Home Minister, Parameshwar